ADVERTISEMENT

ದರ್ಶನ್‌ ಪ್ರಕರಣ | ಸಿಟ್ಟು ಜೀವನದಲ್ಲಿ ಕ್ಯಾರೆಕ್ಟರ್‌ ಆಗಬಾರದು: ಹಂಸಲೇಖ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 15:36 IST
Last Updated 30 ಜೂನ್ 2024, 15:36 IST
<div class="paragraphs"><p>ಹಂಸಲೇಖ</p></div>

ಹಂಸಲೇಖ

   

ಮಂಡ್ಯ: ‘ದರ್ಶನ್‌ ನನ್ನ ಮಗು ಅಂತ ತಿಳಿದುಕೊಳ್ಳಿ. ಮಗು ತಪ್ಪು ಮಾಡಿದ್ರೆ ತಂದೆ ಎಷ್ಟು ನೋವು ತಿಂತಾನೋ, ನಾನೂ ಅಷ್ಟೇ ನೋವು ತಿಂತಿದ್ದೀನಿ. ಆ ಮಗು ಕೂಡ ಅಷ್ಟೇ ನೋವು ತಿಂತಿರುತ್ತೆ. ನಾವು ಆತ ಕೊಟ್ಟಿರುವ ಕೊಡುಗೆ ಇದೆಯಲ್ಲ, ಅದರ ಬಗ್ಗೆಯೂ ಗಮನಕೊಡೋಣ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು. 

ದರ್ಶನ್‌ ಪ್ರಕರಣದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, ‘ಅತ್ಯುನ್ನತ ಸ್ಥಾನಕ್ಕೆ ಏರಿದವನು ಮತ್ತೆ ಕೆಳಗೆ ಬೀಳೋದು ಬೇಡ. ಕೇರಳ ಚಿತ್ರೋದ್ಯಮವೂ ಕೆಳಗೆ ಬಿದ್ದು ಈಗ ಉತ್ತುಂಗದಲ್ಲಿದೆ. ನಮ್ಮದು ಚಂದನವನ ಕಣಯ್ಯಾ. ಒಂದು ಮಳೆಗೆ ಮರ ಒಣಗಿದರೇನಂತೆ, ಇನ್ನೊಂದು ಮಳೆಗೆ ಕಾಡು ಬೆಳೆದೇ ಬೆಳೆಯುತ್ತದೆ’ ಎಂದರು. 

ADVERTISEMENT

ಸಿನಿಮಾ ಕಲಾವಿದರಾದವರು ಸಿಟ್ಟನ್ನು ಸ್ಕ್ರಿಪ್ಟ್‌ ಮಾಡಬೇಕು, ದ್ವೇಷವನ್ನು ಕ್ಯಾರೆಕ್ಟರ್‌ ಮಾಡಬೇಕು. ನಾವು ಆ ರೀತಿ ಸಿನಿಮಾದಲ್ಲಿ ತೋರಿಸಬೇಕು ಅಷ್ಟೇ. ನಿಜಜೀವನದಲ್ಲಿ ಸ್ಕ್ರಿಪ್ಟನ್ನು ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್‌ ಆಗಬಾರದು. ಇದು ಕಲಾವಿದರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.