ಮುಂಬೈ: ಫ್ಯಾಶನ್ ವಿಷಯಕ್ಕೆ ಬಂದರೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ಸಾಟಿ ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ಯಾರೂ ಇಲ್ಲವೆಂದರೂ ತಪ್ಪಾಗುವುದಿಲ್ಲ.
ಕ್ಯಾಶುಯಲ್‌ಗಳಿಂದ ಹಿಡಿದು ಎಂಥದ್ದೇ ಫ್ಯಾಶನ್ ಉಡುಪುಗಳಲ್ಲಿಯೂ ದೀಪಿಕಾ ಆಕರ್ಷಕ ಮತ್ತು ಬೋಲ್ಡ್ ಆಗಿ ಕಂಗೊಳಿಸುತ್ತಾರೆ. ಬಹುಶಃ ದೀಪಿಕಾಳಿಗೆ ಸರಿ ಹೊಂದದ ಯಾವುದೇ ಉಡುಪೂ ಇಲ್ಲ ಅನಿಸುತ್ತೆ.
ಇತ್ತೀಚೆಗೆ, ನಟಿ ಲ್ಯಾಟೆಕ್ಸ್ ಮತ್ತು ಲೆದರ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.
ಶರತ್ಕಾಲಕ್ಕೆ ಪರಿವರ್ತನೆಯಾದ ನಟಿಯ ಆಕರ್ಷಕ ಉಡುಗೆಯ ಚಿತ್ರ ಇನ್‌ಸ್ಟಾಗ್ರಾಮಲ್ಲಿ ಬಿಸಿ ಏರಿಸುತ್ತಿದೆ.
84 ಸಾವಿರದ ಸ್ಟ್ರ್ಯಾಪ್, ಕಪ್ಪು ಬಣ್ಣದ ಲೆದರ್ ಜಾಕೆಟ್ ಮತ್ತು ಪ್ಯಾಂಟ್ ಧರಿಸಿ, ಕಣ್ಣಿಗೆ ಕಾಡಿಗೆ ಹಚ್ಚಿರುವ ಬಾಲಿವುಡ್ ಪದ್ಮಾವತಿ, ತಮ್ಮ ಸೌಂರ್ಯದ ಮೂಲಕ ಪಡ್ಡೆಗಳಿಗೆ ಕಿಚ್ಚು ಹಚ್ಚುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.