ಮುಂಬೈ: ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಕನ್ನಡಕ್ಕಿಂತ ಜಾಸ್ತಿ ಸದ್ದು ಮಾಡಿದ್ದು, ಮಾಡುತ್ತಿರುವುದು ಬಾಲಿವುಡ್‌ನಲ್ಲಿ. ನಟ ರಣವೀರ್ ಸಿಂಗ್ ಅವರನ್ನು ವಿವಾಹವಾಗಿ ಸುಂದರ ಬದುಕನ್ನು ಕಟ್ಟಿಕೊಂಡಿರುವ ದೀಪಿಕಾ ಇದೀಗ ಡ್ರಗ್ ಕುರಿತುಬರೆದುಕೊಂಡಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಮದುವೆಯ ಬಳಿಕ ಡ್ರಗ್ ಚಟಕ್ಕೆ ಒಳಗಾದರೇ? ಸೂಪರ್ ಡ್ರಗ್ ಎಂದು ಹೇಳಿಕೊಂಡಿರುವುದು ಯಾವುದಕ್ಕೆ?ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ದೀಪಿಕಾಇಷ್ಟಪಟ್ಟಿರುವಡ್ರಗ್ 'ರಣವೀರ್'.
ತಮ್ಮ ಇನ್‌ಸ್ಟಾಗ್ರಾಂನಲ್ಲಿ 'ಲವ್ ಈಸ್ ಎಸೂಪರ್ ಪವರ್' ಎಂದು ಬರೆದ ಟೀ ಶರ್ಟ್ ಧರಿಸಿರುವ ರಣವೀರ್, ಆಚಿತ್ರವನ್ನು ಪೋಸ್ಟ್ ಮಾಡಿರುವ ದೀಪಿಕಾ;'ನೀನು... ನನ್ನ ಸೂಪರ್ ಡ್ರಗ್' ಎಂದು ಕ್ಯಾಪ್ಶನ್ ನೀಡಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ದಂಪತಿ ತಿರುಪತಿ ಮತ್ತು ಅಮೃತಸರದಲ್ಲಿ ಆಚರಿಸಿಕೊಂಡಿದ್ದಾರೆ. ರಣವೀರ್‌ಪೋಷಕರು, ಸಹೋದರಿ ರಿತಿಕಾ ಭವ್ನಾನಿ ಮತ್ತು ದೀಪಿಕಾ ಪಾಲಕರು ಮತ್ತು ತಂಗಿ ಸೇರಿ ಮೊದಲು ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಅಮೃತಸರದ ಸ್ವರ್ಣ ಮಂದಿರಕ್ಕೆಭೇಟಿ ನೀಡಿದ್ದಾರೆ.
ದೀಪಿಕಾ ಮತ್ತು ರಣವೀರ್ ಇಬ್ಬರು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರ ಜೀವನಾಧಾರಿತ ಸಿನಿಮಾ ಕಬೀರ್ ಖಾನ್ ಅವರ 83 ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.