ADVERTISEMENT

‘ಕಲ್ಕಿ–2898 AD’ ಚಿತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿದ ನಟಿ ದೀಪಿಕಾ ಪಡುಕೋಣೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮೇ 2024, 14:34 IST
Last Updated 14 ಮೇ 2024, 14:34 IST
<div class="paragraphs"><p>‘ಕಲ್ಕಿ–2898 AD‘ ಚಿತ್ರದ ಪೋಸ್ಟರ್‌, ನಟಿ&nbsp;ದೀಪಿಕಾ ಪಡುಕೋಣೆ</p></div>

‘ಕಲ್ಕಿ–2898 AD‘ ಚಿತ್ರದ ಪೋಸ್ಟರ್‌, ನಟಿ ದೀಪಿಕಾ ಪಡುಕೋಣೆ

   

ಬೆಂಗಳೂರು: ನಟ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ ‘ಕಲ್ಕಿ–2898 AD‘ ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ನಟಿ ದೀಪಿಕಾ ಪಡುಕೋಣೆ ತಮ್ಮ ಪಾತ್ರದ ಡಬ್ಬಿಂಗ್‌ ಅನ್ನು ಹಿಂದಿ ಹಾಗೂ ಕನ್ನಡದಲ್ಲಿ ಪೂರ್ಣಗೊಳಿಸಿದ್ದಾರೆ.

ವೈಜಯಂತಿ ಮೂವೀಸ್‌ ನಿರ್ಮಾಣದ ‘ಕಲ್ಕಿ–2898 AD‘ ಚಿತ್ರಕ್ಕೆ ನಾಗ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ದೀಪಿಕಾ ಪಡುಕೋಣೆ ತಮ್ಮ ಪಾತ್ರದ ಡಬ್ಬಿಂಗ್‌ ಅನ್ನು ಹಿಂದಿ ಹಾಗೂ ಕನ್ನಡದಲ್ಲಿ ನಾನೇ ಮಾಡುತ್ತೇನೆ ಎಂದು ಚಿತ್ರತಂಡಕ್ಕೆ ತಿಳಿಸಿದ್ದರು. ಹಾಗೂ ಇತ್ತೀಚೆಗೆ ನಟಿ ಡಬ್ಬಿಂಗ್‌ ಕೆಲಸವನ್ನು ಮುಗಿಸಿರುವುದಾಗಿ ‘ಟೈಮ್ಸ್ ನೌ‘ ವರದಿ ಮಾಡಿದೆ.

ADVERTISEMENT

‘ಕಲ್ಕಿ–2898 AD’ ಚಿತ್ರದಲ್ಲಿ ‘ಭೈರವ’ಎಂಬ ಪಾತ್ರದಲ್ಲಿ ಪ್ರಭಾಸ್‌ ಕಾಣಿಸಿಕೊಳ್ಳಲಿದ್ದಾರೆ.

ಬಹುಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಈಗಾಗಲೇ ಪೋಸ್ಟರ್‌ಗಳ ಮೂಲಕವೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸಿನಿಮಾದಲ್ಲಿ ಪ್ರಭಾಸ್‌ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಚಿತ್ರತಂಡ ಈಗಾಗಲೇ ರಿವೀಲ್‌ ಮಾಡಿದೆ.

ಚಿತ್ರತಂಡ ಇಟಲಿ ಸೇರಿದಂತೆ ವಿಶ್ವದಾದ್ಯಂತ ಚಿತ್ರೀಕರಣ ಮುಗಿಸಿದೆ ಎನ್ನಲಾಗಿದೆ. ಅಮಿತಾಭ್ ಬಚ್ಚನ್‌, ಕಮಲ್‌ ಹಾಸನ್‌, ರಾಣಾ ದಗ್ಗು ಭಾಟಿಯಾ, ದಿಶಾ ಪಟಾಣಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮೂಲ ತೆಲುಗು ಚಿತ್ರವಾಗಿದ್ದು, ಕನ್ನಡ, ತಮಿಳು, ಮಲಯಾಳ, ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿಯೂ ಇದೇ ಜೂನ್‌ 27ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.