ಬೆಂಗಳೂರು: ಬಾಲಿವುಡ್‌ನಲ್ಲಿ ಸಾಕಷ್ಟು ಟ್ರೆಂಡ್ ಹುಟ್ಟುಹಾಕಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದ ಹೃತಿಕ್ ರೋಶನ್ ಹಾಗೂ ಟೈಗರ್ ಶ್ರಾಫ್ ಅಭಿನಯದ ವಾರ್ ಸಿನಿಮಾ ದೀಪಿಕಾ ಪಡುಕೋಣೆ ಅವರ ಹೇಳಿಕೆಯಿಂದ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ.
ವಾರ್ ಸಿನಿಮಾದಲ್ಲಿನಹೃತಿಕ್ ರೋಶನ್ ಅಭಿನಯಕ್ಕೆದೀಪಿಕಾ ಪಡುಕೋಣೆ ಫಿದಾ ಆಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಹೃತಿಕ್ ರೋಶನ್ ಕಾರ್ನರ್ ಹೌಸ್ ಅಂಗಡಿಯಲ್ಲಿರುವ ಡೆತ್ ಬೈ ಚಾಕೊಲೇಟ್ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿರುವ ಕಾರ್ನರ್ ಹೌಸ್ ಮಳಿಗೆ ಸಿಹಿ ಕೇಕ್ ಮತ್ತು ಐಸ್‌ಕ್ರಿಮ್‌ಗೆ ಸಾಕಷ್ಟು ಪ್ರಸಿದ್ಧಿಯಾಗಿದೆ. ಇಲ್ಲಿ ದೊರೆಯುವಡೆತ್ ಬೈ ಚಾಕೊಲೇಟ್(ಕೇಕ್)ನಂತೆ ಹೃತಿಕ್ ರೋಶನ್ ಎಂದು ದೀಪಿಕಾ ಟ್ವೀಟ್ ಮಾಡಿದ್ದಾರೆ.
ದೀಪಿಕಾ ಟ್ವೀಟ್‌ಗೆ ಹೃತಿಕ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವಿಬ್ಬರೂಒಂದು ಸಿನಿಮಾದಲ್ಲಿ ನಟಿಸಬೇಕು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ.
ರಾಮಾಯಣ ಸಿನಿಮಾದಲ್ಲಿ ಹೃತಿಕ್ ಮತ್ತು ದೀಪಿಕಾ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ರಾಮಾಯಣ ಚಿತ್ರತಂಡ ಇದನ್ನು ನಿರಾಕರಿಸಿದೆ. ಈ ಚಿತ್ರದಲ್ಲಿ ಹೃತಿಕ್ ರಾಮನ ಪಾತ್ರದಲ್ಲಿ, ದೀಪಿಕಾ ಸೀತೆ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.