ಬಾಲಿವುಡ್ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ತಮ್ಮ ಮಗಳಿಗೆ ದೀಪಾವಳಿಯ ಶುಭ ಸಂದರ್ಭದಲ್ಲಿ ನಾಮಕರಣ ಮಾಡಿದ್ದಾರೆ.
ಮಗಳ ಪುಟ್ಟ ಪಾದದ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ದೀಪಿಕಾ, ಮಗಳಿಗೆ 'ದುವಾ ಪಡುಕೋಣೆ ಸಿಂಗ್' ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.
'ಮಗಳಿಗೆ ದುವಾ ಎಂದು ನಾಮಕರಣ ಮಾಡಲಾಗಿದ್ದು, ದುವಾ ಎಂದರೆ ಪ್ರಾರ್ಥನೆ ಎಂದರ್ಥ. ಅದೇ ಹೆಸರನ್ನೇ ಆಯ್ಕೆ ಮಾಡಿದ್ದು ಏಕೆಂದರೆ ಅವಳು ನಮ್ಮೆಲ್ಲಾ ಪ್ರಾರ್ಥನೆಗೆ ಉತ್ತರವಾಗಿದ್ದಾಳೆ' ಎಂದು ಬರೆದುಕೊಂಡಿದ್ದಾರೆ
2018ರಲ್ಲಿ ರಣವಿರ್- ದೀಪಿಕಾ ವಿವಾಹವಾಗಿದ್ದರು. 2024ರ ಸೆಪ್ಟೆಂಬರ್ 8ರಂದು ಹೆಣ್ಣುಮಗುವಿಗೆ ದೀಪಿಕಾ ಜನ್ಮ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.