ADVERTISEMENT

ಅಂತೂ ಇಂತೂ ದೀಪಿಕಾ–ರಣಬೀರ್‌ ಮದುವೆ ನಿಕ್ಕಿ

ರೋಹಿಣಿ ಮುಂಡಾಜೆ
Published 21 ಅಕ್ಟೋಬರ್ 2018, 12:37 IST
Last Updated 21 ಅಕ್ಟೋಬರ್ 2018, 12:37 IST
ದೀಪಿಕಾ ಪಡುಕೋಣೆ ರಣವೀರ್‌ ಸಿಂಗ್‌
ದೀಪಿಕಾ ಪಡುಕೋಣೆ ರಣವೀರ್‌ ಸಿಂಗ್‌   

ಮುಂಬೈ: ಬಾಲಿವುಡ್‌ನ ಬಹುಚರ್ಚಿತ ಪ್ರೇಮಿಗಳ ಮದುವೆ ದಿನ ಕೊನೆಗೂ ನಿಗದಿಯಾಗಿದೆ. ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಮದುವೆ ನವೆಂಬರ್‌ 14 ಮತ್ತು 15ರಂದು ನಡೆಯಲಿರುವುದು ಖಚಿತವಾಗಿದೆ‌.

ಆಮಂತ್ರಣ ಪತ್ರಿಕೆಯನ್ನು ಭಾನುವಾರ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಈ ಜೋಡಿ, ಮದುವೆ ಎಲ್ಲಿ ನಡೆಯಲಿದೆ ಎಂಬುದನ್ನು ಗುಟ್ಟಾಗಿಟ್ಟಿರುವುದು ವಿಶೇಷ.

‘ನಮ್ಮ ಕುಟುಂಬಗಳ ಆಶೀರ್ವಾದದೊಂದಿಗೆ, ನಮ್ಮ ಮದುವೆ ನವೆಂಬರ್‌ 14 ಮತ್ತು 15ರಂದು ನಿಗದಿಯಾಗಿದೆ ಎಂದು ತಿಳಿಸಲು ಸಂತೋಷಪಡುತ್ತೇವೆ. ವರ್ಷಗಳಿಂದೀಚೆ ನಮ್ಮ ಮೇಲೆ ನೀವು ಅಪಾರ ಪ್ರೀತಿ ತೋರಿಸಿದ್ದೀರಿ. ನಮ್ಮ ಬದುಕಿನ ಪ್ರೀತಿ, ನಿಷ್ಠೆ, ಸ್ನೇಹ ಮತ್ತು ಸಾಂಗತ್ಯದ ಪ್ರಯಾಣದ ಈ ಅಮೂಲ್ಯ ಕ್ಷಣದಲ್ಲಿ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಹಾರೈಸುತ್ತೇವೆ’ ಎಂಬ ಒಕ್ಕಣೆ ಇದೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುವ ಆಮಂತ್ರಣ ಪತ್ರಿಕೆಯ ಕೊನೆಯಲ್ಲಿ ದೀಪಿಕಾ ಮತ್ತು ರಣವೀರ್‌ ಎಂದು ಸಹಿ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.