ಬೆಂಗಳೂರು: ನಟ–ನಟಿಯರಿಗೆ ಅವರ ಜೀವನದಲ್ಲಿ ಗಾಸಿಪ್‌ಗಳು, ವದಂತಿಗಳು ಹಾಗೂ ಕೆಲವರಿಂದ ತುಚ್ಚ ಮಾತುಗಳು ಸಾಮಾನ್ಯ. ಅದರಲ್ಲೂ ನಟಿಯರ ವಿಷಯದಲ್ಲಿ ಇದು ಒಂದು ಹೆಜ್ಜೆ ಮುಂದೆ.
ಬಾಲನಟಿಯಾಗಿದ್ದಾಗಲೇ ಗಮನ ಸೆಳೆದು ಇದೀಗ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಟಿ ಹನ್ಸಿಕಾ ಮೊಟ್ವಾನಿಗೂ ಇದೇ ರೀತಿ ಪ್ರಸಂಗ ಎದುರಾಗಿತ್ತು. ಈ ಬಗ್ಗೆ ಸ್ವತಃ ಅವರು ಇತ್ತೀಚೆಗೆ ಮೌನ ಮುರಿದು ಮಾತನಾಡಿದ್ದಾರೆ.
ತನ್ನ 10 ನೇ ವಯಸ್ಸಿನಲ್ಲೇ ಶಕಲಕ್ ಬೂಮ್ ಬೂಮ್, ಕೋಯಿ ಮಿಲ್ ಗಯಾ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿ ಜನಪ್ರಿಯವಾಗಿದ್ದ ಹನ್ಸಿಕಾ ಆನಂತರ ಸಿನಿಮಾಗಳಲ್ಲಿ ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಅಭಿನಯಿಸಲು ಶುರು ಮಾಡಿದರು.
ಈ ಬಗ್ಗೆ ಕಣ್ಣು ಕೀಲಿಸಿಕೊಂಡ ಕೆಲವರು ‘ಹನ್ಸಿಕಾ ಇಷ್ಟು ಬೇಗ ದೊಡ್ಡವಳಾಗಿ ಬೆಳೆಯಲು ಮತ್ತು ಸುಂದರವಾಗಿ ಕಾಣಲು ಹನ್ಸಿಕಾಗೆ ಹನ್ಸಿಕಾ ತಾಯಿ ಹಾರ್ಮೊನ್ ಇಂಜೆಕ್ಸನ್ ಕೊಟ್ಟಿದ್ದಾರೆ’ ಎಂದು ಮಾತನಾಡಿಕೊಂಡಿದ್ದರು. ಇದಕ್ಕೆ ಕಾರಣ ಹನ್ಸಿಕಾ ತಾಯಿ ಮೊನಾ ಡರ್ಮಟಾಲಜಿ (ಚರ್ಮರೋಗ ಶಾಸ್ತ್ರಜ್ಞೆ) ತಜ್ಞೆ ಆಗಿದ್ದರು.
ಈ ಬಗ್ಗೆ ಖಾಸಗಿ ಮಾಧ್ಯಮದ ಜೊತೆ ಸಂದರ್ಶನದಲ್ಲಿ ಮಾತನಾಡಿರುವ ಹನ್ಸಿಕಾ, ‘ನನಗೆ ಹಾರ್ಮೋನ್ ಕೊಟ್ಟು ದೊಡ್ಡವಳನ್ನಾಗಿ ಮಾಡಿದರು ಎಂಬ ಆರೋಪವನ್ನು ನನ್ನ 21 ನೇ ವಯ್ಸಸಿನಲ್ಲಿ (ಈಗ 31 ವಯಸ್ಸು) ಪುಂಖಾನುಪುಂಖವಾಗಿ ಮಾಡಿದರು. ಆ ಸಮಯದಲ್ಲಿ ತೆಗೆದುಕೊಳ್ಳಬಹುದಾಗಿದ್ದರೇ ಇವಾಗಲೂ ತೆಗೆದುಕೊಳ್ಳಬೇಕಾಗಿತ್ತಲ್ಲ? ಈ ರೀತಿ ಆರೋಪ ಮಾಡುವವರಿಗೆ ತಲೆ ಇಲ್ಲ. ನಾವು ಪಂಜಾಬಿಗಳು. ಪಂಜಾಬಿ ಹೆಣ್ಣುಮಕ್ಕಳು ಸಾಮಾನ್ಯವಾಗಿ 10–12 ವಯಸ್ಸಿನಲ್ಲಿ ದೊಡ್ಡವರಾಗುತ್ತಾರೆ’ ಎಂದು ಹೇಳಿದ್ದಾರೆ. ಈ ವಿಷಯವನ್ನು ಹನ್ಸಿಕಾ ತಾಯಿ ಮೊನಾ ಕೂಡ ಸಮರ್ಥಿಸಿಕೊಂಡಿದ್ದಾರೆ.
ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ, ಬರೋಬ್ಬರಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಇಂದಿಗೂ ಬೇಡಿಕೆ ನಟಿಯಾಗಿರುವ ಹನ್ಸಿಕಾ 2022ರ ಡಿಸೆಂಬರ್‌ನಲ್ಲಿ ಉದ್ಯಮಿ ಸೋಹೆಲ್ ಕಟಾರಿಯಾ ಅವರನ್ನು ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ಸೋಹೆಲ್ ಅವರನ್ನು ವರಿಸುವ ಸಮಯದಲ್ಲೂ ಕೂಡ ಹನ್ಸಿಕಾ ಅವರನ್ನು ಟ್ರೋಲ್ ಮಾಡಲಾಗಿತ್ತು. ಸೋಹೆಲ್ ಮೊದಲ ಮದುವೆಯಲ್ಲಿ ಹನ್ಸಿಕಾ ಬಾಲಕಿಯಾಗಿ ಹಾಜರಿದ್ದಳು ಎಂದು ಚಿತ್ರಗಳನ್ನು ಹಂಚಿಕೊಳ್ಳಲಾಗಿತ್ತು. ಇದಕ್ಕೂ ಪ್ರತಿಕ್ರಿಯೆ ನೀಡಿರುವ ಅವರು, ‘ನಾನು ಸೆಲಿಬ್ರಿಟಿ ಆಗಿರುವುದಕ್ಕೆ ತೆರುತ್ತಿರುವ ಬೆಲೆ ಇದು’ ಎಂದು ಹೇಳಿದ್ದಾರೆ.
ಹೃತಿಕ್ ರೋಶನ್ ಅವರ ಕೊಯಿ ಮಿಲ್ ಗಯಾ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಹನ್ಸಿಕಾ, ತೆಲುಗಿನ ‘ದೇಶಮುದುರು’ ಚಿತ್ರದ ಭರ್ಜರಿ ಓಪನಿಂಗ್ ನಂತರ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದರು. ಇದೀಗ ತಮಿಳು ಹಾಗೂ ಹಿಂದಿಯಲ್ಲಿ ಅವರ 5 ಚಿತ್ರಗಳು ಬಿಡುಗಡೆಯಾಗಬೇಕಿದೆ.
ಆಧಾರ: ಇಂಡಿಯಾ ಟುಡೇ ವೆಬ್‌ಸೈಟ್ ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.