ADVERTISEMENT

ಡ್ರೀಮ್‌ ಗರ್ಲ್‌ ಫಿಟ್‌ ಆ್ಯಂಡ್‌ ಫೈನ್‌

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 11:45 IST
Last Updated 12 ಜುಲೈ 2020, 11:45 IST
ಹೇಮಾ ಮಾಲಿನಿ
ಹೇಮಾ ಮಾಲಿನಿ   

ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೊರೊನಾ ಪಾಸಿಟಿವ್‌ ವರದಿಯಾದ ಬೆನ್ನಲ್ಲೇ ಬಾಲಿವುಡ್‌ನಲ್ಲಿ ಅನೇಕರ ಹೆಸರು ಕೊರೊನಾ ಪಾಸಿಟಿವ್ ಪಟ್ಟಿಯಲ್ಲಿ ಕೇಳಿಬಂದಿತ್ತು. 71 ವರ್ಷದ ಹಿರಿಯ ನಟಿ ಹೇಮಾಮಾಲಿನಿ ಕೂಡ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿತ್ತು. ಈಗ ಅದು ಗಾಳಿ ಸುದ್ದಿ ಎಂದು ಅವರ ಮಗಳು ಇಶಾ ಡಿಯೋಲ್‌ ಸ್ಪಷ್ಟಪಡಿಸಿದ್ದಾರೆ.

ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಅವರು, ‘ತಪ್ಪು ಮಾಹಿತಿಗೆ ಪ್ರತಿಕ್ರಿಯಿಸಬೇಡಿ’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ . ‘ನನ್ನ ಅಮ್ಮ ಡ್ರೀಮ್‌ಗರ್ಲ್‌ ಹೇಮಾ ಫಿಟ್‌ ಆ್ಯಂಡ್‌ ಫೈನ್‌. ಅವರ ಆರೋಗ್ಯದ ಕುರಿತಾದ ಸುದ್ದಿ ಖಂಡಿತಾ ಸುಳ್ಳು’ ಎಂದು ಟ್ವೀಟ್‌ ಮಾಡಿದ್ದಾರೆ.

ಇಶಾ ಟ್ವೀಟ್‌ ಮಾಡಿದ ಬೆನ್ನಲ್ಲೇ ನಟಿ ಹೇಮಾ ಮಾಲಿನಿ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ‘ಕೃಷ್ಣನ ದಯೆಯಿಂದ ನಾನು ಸಂಪೂರ್ಣ ಆರಾಮವಾಗಿದ್ದೇನೆ’ ಎಂದು ಸ್ಪಷ್ಟನೆ ನೀಡಿರುವ ವಿಡಿಯೊ ಹಂಚಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.