ಮುಂಬೈ: ಒಟಿಟಿ ವೇದಿಕೆಯ ಷೋ ಒಂದರ ಸಂಚಿಕೆಯಲ್ಲಿ ಅಶ್ಲೀಲ ದೃಶ್ಯಗಳಲ್ಲಿ ಬಾಲಕಿಯರನ್ನು ತೋರಿಸಿದ ಆರೋಪದಲ್ಲಿ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಹಾಗೂ ಅವರ ತಾಯಿ ಶೋಭಾ ಕಪೂರ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ.
ಒಟಿಟಿ ಪ್ಲಾಟ್‌ಫಾರ್ಮ್ ‘ಆಲ್ಟ್ ಬಾಲಾಜಿ’ಯಲ್ಲಿ ಪ್ರಸಾರವಾದ ‘ಗಂದಿ ಬಾತ್’( Gandi Baat) ವೆಬ್ ಸಿರೀಸ್‌ನ ಸೀಸನ್ 6ರಲ್ಲಿ ಬಾಲಕಿಯರ ಅಶ್ಲೀಲ ದೃಶ್ಯಗಳನ್ನು ತೋರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಾಲಾಜಿ ಟೆಲಿಫಿಲ್ಮ್ ಲಿಮಿಟೆಡ್, ಏಕ್ತಾ ಕಪೂರ್ ಹಾಗೂ ಆಕೆಯ ತಾಯಿ ಶೋಭಾ ಕಪೂರ್ ವಿರುದ್ಧ ಮುಂಬೈನ ಎಂಎಚ್‌ಬಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295(ಎ), ಐಟಿ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 13 ಮತ್ತು 15ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಆ ನಿರ್ದಿಷ್ಟ ದೃಶ್ಯವು 2021ರ ಫೆಬ್ರುವರಿ ಮತ್ತು ಏಪ್ರಿಲ್ ನಡುವೆ ಪ್ರಸಾರವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ, ಈಗ ಆ ದೃಶ್ಯಗಳು ವೆಬ್ ಸಿರೀಸ್‌ನಲ್ಲಿ ಪ್ರಸಾರವಾಗುತ್ತಿಲ್ಲ ಎಂದು ವರದಿಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.