ADVERTISEMENT

ಶಿವಾಜಿ ಗಣೇಶನ್ ಜನ್ಮದಿನ: ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಅಕ್ಟೋಬರ್ 2021, 7:26 IST
Last Updated 1 ಅಕ್ಟೋಬರ್ 2021, 7:26 IST
ಖ್ಯಾತ ನಟ ಶಿವಾಜಿ ಗಣೇಶನ್ ಅವರ ಹುಟ್ಟುಹಬ್ಬ
ಖ್ಯಾತ ನಟ ಶಿವಾಜಿ ಗಣೇಶನ್ ಅವರ ಹುಟ್ಟುಹಬ್ಬ   

ಬೆಂಗಳೂರು: ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಅವರ 93ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಗೂಗಲ್, ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

ಖ್ಯಾತನಾಮರ ಹುಟ್ಟುಹಬ್ಬ ಮತ್ತು ವಿಶೇಷ ಆಚರಣೆ, ಸಂದರ್ಭಕ್ಕೆ ಅನುಸಾರ ಗೂಗಲ್ ವಿವಿಧ ರೀತಿಯಲ್ಲಿ ಡೂಡಲ್ ರಚಿಸಿ, ಸರ್ಚ್ ಮುಖಪುಟದಲ್ಲಿ ಪೋಸ್ಟ್ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತದೆ.

ಬೆಂಗಳೂರು ಮೂಲದ ಕಲಾವಿದ ನೂಪುರ್ ರಾಜೇಶ್ ಛೋಕ್ಸಿ ಎಂಬವರು ರಚಿಸಿದ ಡೂಡಲ್ ಅನ್ನು ಗೂಗಲ್ ಬಳಸಿಕೊಂಡಿದೆ.

ADVERTISEMENT

ನಟ ಶಿವಾಜಿ ಗಣೇಶನ್ ಅವರು 1928ರ ಅಕ್ಟೋಬರ್ 1ರಂದು ತಮಿಳುನಾಡಿನ ವಿಲ್ಲುಪುರಂನಲ್ಲಿ ಜನಿಸಿದ್ದರು.

ಗಣೇಶಮೂರ್ತಿ ಎಂಬ ಹೆಸರು ಹೊಂದಿದ್ದ ಅವರು, ಏಳನೇ ವಯಸ್ಸಿನಲ್ಲಿ ಮನೆ ತೊರೆದು ನಾಟಕ ತಂಡವನ್ನು ಸೇರಿಕೊಂಡಿದ್ದರು.

ಬಳಿಕ 1945ರ ಡಿಸೆಂಬರ್‌ನಲ್ಲಿ ‘ಶಿವಾಜಿ ಕಂಡ ಹಿಂದು ರಾಜ್ಯಂ’ ನಾಟಕದಲ್ಲಿ ಶಿವಾಜಿ ಪಾತ್ರ ಮಾಡಿದ್ದ ಅವರ ಅದ್ಭುತ ನಟನೆ ಕಂಡು ಅವರನ್ನು ‘ಶಿವಾಜಿ’ ಎಂದೇ ಜನರು ಕರೆಯಲಾರಂಭಿಸಿದ್ದರು. ಹೀಗಾಗಿ ಮುಂದೆ ಅವರು ‘ಶಿವಾಜಿ ಗಣೇಶನ್’ ಎಂಬ ಹೆಸರಿನಿಂದ ಜನಪ್ರಿಯರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.