ADVERTISEMENT

ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಫರ್ಹಾನ್‌ ಅಖ್ತರ್‌– ಶಿಬಾನಿ ದಂಡೇಕರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2022, 6:05 IST
Last Updated 18 ಫೆಬ್ರುವರಿ 2022, 6:05 IST
ಫರ್ಹಾನ್‌ ಅಖ್ತರ್‌– ಶಿಬಾನಿ ದಂಡೇಕರ್‌
ಫರ್ಹಾನ್‌ ಅಖ್ತರ್‌– ಶಿಬಾನಿ ದಂಡೇಕರ್‌    

ಮುಂಬೈ: ಕೆಲ ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದ ಬಾಲಿವುಡ್ ನಟ ಫರ್ಹಾನ್‌ ಅಖ್ತರ್‌ ಮತ್ತು ನಟಿ ಶಿಬಾನಿ ದಂಡೇಕರ್‌ ಶನಿವಾರ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ‘ಹಿಂದೂಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ಈ ವರದಿ ಪ್ರಕಾರ, ಮದುವೆ ಸಮಾರಂಭವು ಖಾಸಗಿಯಾಗಿ ನೇರವೇರಲಿದ್ದು, ಮಾಧ್ಯಮದವರಿಗೆ ಅವಕಾಶವಿರುವುದಿಲ್ಲ. ಈ ಸಮಾರಂಭಕ್ಕೆ ಕುಟುಂಬ ಸದಸ್ಯರನ್ನು ಮಾತ್ರ ಆಹ್ವಾನಿಸಲಾಗಿದೆ.

ಫೆಬ್ರುವರಿ 21 ರಂದು ಮುಂಬೈನ ಬಾಂದ್ರಾದಲ್ಲಿರುವ ಅಖ್ತರ್‌ ನಿವಾಸದಲ್ಲಿ ದಂಪತಿ ಮದುವೆಯನ್ನು ನೋಂದಾಯಿಸಿಕೊಳ್ಳಲಿದ್ದಾರೆ.

ಅಂದು ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಸ್ನೇಹಿತರು ಹಾಗೂ ಬಾಲಿವುಡ್‌ನ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.