ADVERTISEMENT

‘ವಾರಾಣಸಿ’ಯತ್ತ ಫಾದರ್‌ ಚಿತ್ರತಂಡ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 0:45 IST
Last Updated 30 ಅಕ್ಟೋಬರ್ 2024, 0:45 IST
ಡಾರ್ಲಿಂಗ್‌ ಕೃಷ್ಣ 
ಡಾರ್ಲಿಂಗ್‌ ಕೃಷ್ಣ    

‘ಆರ್‌.ಸಿ. ಸ್ಟುಡಿಯೊಸ್‌’ ಬ್ಯಾನರ್‌ನಲ್ಲಿ ನಿರ್ದೇಶಕ ಆರ್‌.ಚಂದ್ರು ನಿರ್ಮಾಣ ಮಾಡುತ್ತಿರುವ, ರಾಜ್‌ ಮೋಹನ್‌ ನಿರ್ದೇಶನದ ‘ಫಾದರ್‌’ ಸಿನಿಮಾದ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಆ್ಯಕ್ಷನ್‌ ದೃಶ್ಯಗಳ ಚಿತ್ರೀಕರಣಕ್ಕೆ ವಾರಾಣಸಿಯತ್ತ ಚಿತ್ರತಂಡ ಹೊರಡಲಿದೆ. 

ಶಿವರಾಜ್‌ಕುಮಾರ್‌ ನಟನೆಯ ‘ಬೈರಾಗಿ’ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ರಾಜ್‌ ಮೋಹನ್‌ ಕಾರ್ಯನಿರ್ವಹಿಸಿದ್ದರು. ತಂದೆ-ಮಗನ ಬಾಂಧವ್ಯ ಸಾರುವ ‘ಫಾದರ್‌’ ಸಿನಿಮಾದಲ್ಲಿ ‘ಲವ್‌ ಮಾಕ್ಟೇಲ್‌’ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ಹಾಗೂ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಕೃಷ್ಣನಿಗೆ ಅಮೃತಾ ಅಯ್ಯಂಗಾರ್‌ ಜೋಡಿಯಾಗಿದ್ದಾರೆ. ತೆಲುಗಿನ ಖ್ಯಾತ ನಟ ಸುನೀಲ್‌ ಸೇರಿದಂತೆ ಅನೇಕ ಪರಭಾಷೆ ನಟ, ನಟಿಯರ ದಂಡೇ ಈ ಚಿತ್ರದಲ್ಲಿದೆ. ಚಿತ್ರದ ಕೊನೆಯ ಹಂತದ ಶೂಟಿಂಗ್ ಬನ್ನೇರುಘಟ್ಟದಲ್ಲಿರುವ ಐತಿಹಾಸಿಕ ದೇವಾಲಯ ಶ್ರೀ ಚಂಪಕಧಾಮಸ್ವಾಮಿ ದೇವಾಲಯದಲ್ಲಿ ನಡೆಯಿತು. ಇಲ್ಲಿ ನೂರಾರು ಜನ ಜೂನಿಯರ್‌ ಆರ್ಟಿಸ್ಟ್‌ ಸಮ್ಮುಖದಲ್ಲಿ ಚಿತ್ರದ ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಯಿತು. ವಿನೋದ್ ಮಾಸ್ಟರ್ ಸಾಹಸ ನಿರ್ದೇಶನದಲ್ಲಿ ದೃಶ್ಯಗಳು ಸೆರೆಯಾದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT