ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಇಂದು ವಿಶೇಷ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ತಂದೆಯಂದಿರ ದಿನದ ಶುಭಾಶಯ ಕೋರಿದ್ದಾರೆ.
ತೆಲಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಇನ್‌ಸ್ಟಾಗ್ರಾಮ್‌ನಲ್ಲಿ ತಂದೆಯೊಂದಿನ ಫೋಟೊ ಹಂಚಿಕೊಂಡು, ಎಲ್ಲರಿಗೂ ತಂದೆಯಂದಿರ ದಿನದ ಶುಭಾಶಯಗಳು. ವಿಶೇಷವಾಗಿ ವಿಶ್ವದ ಬೆಸ್ಟ್ ತಂದೆಗೆ( ಅಲ್ಲು ಅರವಿಂದ್) ಶುಭಾಶಯ ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ಬಾಲಿವುಡ್ ಕಿರುತೆರೆ ಧಾರವಾಹಿಗಳಲ್ಲಿ ನಟಿಸುವ ಮೋಹಿತ್ ದಗ್ಗಾ ಅವರು ಸಾಮಾಜಿಕ ಜಾಲತಾಣದಲ್ಲಿ ಕಳೆದ ವರ್ಷ ತಂದೆಯಂದಿರ ದಿನವನ್ನು ಹೇಗೆ ಆಚರಿಸಿದರು ಎಂದು ಪೋಸ್ಟ್ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಮಗಳು ಅಶ್ವಿಕಾ ವಿಶೇಷವಾದ ಕೇಕ್ ತಯಾರಿಸಿ, ಅದರ ಮೇಲೆ ‘ಸೂಪರ್ ಡ್ಯಾಡ್‘ ಎಂದು ಬರೆದು ಸರ್ಪ್ರೈಸ್ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ.
ಜೊತೆಗೆ ಮೋಹಿತ್ ದಗ್ಗಾ ಅವರ ತಂದೆ ಜೊತೆಗಿನ ಚಿತ್ರ ಹಂಚಿಕೊಂಡು ನಾನು ಪ್ರತಿ ದಿನವನ್ನು ನನ್ನ ತಂದೆಗೆ ಅರ್ಪಿಸುತ್ತೇನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.