ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಅವರ ಬದುಕು ಮತ್ತು ಚಿಂತನೆ ಆಧರಿಸಿದ ಚಲನಚಿತ್ರದ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ. ‘ಮಹಾಭಾರತ’ ಖ್ಯಾತಿಯ ಗಜೇಂದ್ರ ಚೌಹಾಣ್ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ.
ಚಿತ್ರದ ನಿರ್ದೇಶಕ ಮಿಲನ್ ಭೌಮಿಕ್ ಅವರು, ‘ಏಕ್ ಔರ್ ನರೇನ್’ ಹೆಸರಿನ ಈ ಚಿತ್ರದಲ್ಲಿ ಎರಡು ಕಥಾ ಹಂದರವಿರಲಿದೆ. ಒಂದು ಸ್ವಾಮಿ ವಿವೇಕಾನಂದ ಅವರ ಜೀವನ–ಸಾಧನೆ, ಮತ್ತೊಂದು ಮೋದಿಯವರ ಚಿಂತನೆ ಬಿಂಬಿಸಲಿದೆ’ ಎಂದರು.
‘ಚಿತ್ರಕಥೆ ಎರಡು ವ್ಯಕ್ತಿತ್ವವನ್ನು ಆಧರಿಸಿದೆ. ವಿವೇಕಾನಂದ ಅವರು ವಿಶ್ವ ಭ್ರಾತೃತ್ವದ ಸಂದೇಶ ಹಾಗೂ ಇದು ಹೇಗೆ ಭಾರತೀಯ ಸಂಸ್ಕೃತಿಯಲ್ಲಿ ಸೇರಿದೆ ಎಂದು ಸಾರಿದವರು. ಮೋದಿ ಅವರು ರಾಜಕೀಯವಾಗಿ ಹೆಸರಾಗಿದ್ದು, ಭಾರತವನ್ನು ವಿಶ್ವದಲ್ಲೇ ಹೊಸ ಎತ್ತರಕ್ಕೆ ಒಯ್ದವರು. ಇಬ್ಬರೂ ಭಾರತಕ್ಕೆ ಜಾಗತಿಕವಾಗಿ ಹೆಸರು ತಂದಿದ್ದಾರೆ’ ಎಂದು ಹೇಳಿದರು.
‘ಚಿತ್ರೀಕರಣ ಕೋಲ್ಕತ್ತ ಮತ್ತು ಗುಜರಾತ್‌ನಲ್ಲಿ ನಡೆಯಲಿದ್ದು, ಮಾರ್ಚ್ 12ರಂದು ಆರಂಭವಾಗಿ, ಏಪ್ರಿಲ್‌ಗೆ ಮುಗಿಯಲಿದೆ. ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಬಿಡುಗಡೆ ಆಗಲಿದೆ’ ಎಂದು ಭೌಮಿಕ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.