ಬೆಂಗಳೂರು: ಮುಂಬೈ ಮೂಲದ ಸಿನಿಮಾ ವಿಮರ್ಶಕರ ಕೂಟದ(ಎಫ್‌ಸಿಜಿ) ಪ್ರಶಸ್ತಿಗೆ ಕನ್ನಡದ ‘ನಾತಿಚರಾಮಿ’, ‘ಅಮ್ಮಚ್ಚಿಯೆಂಬ ನೆನಪು’ ಮತ್ತು ‘ಒಂದಲ್ಲಾ ಎರಡಲ್ಲಾ...’ ಸಿನಿಮಾಗಳು ನಾಮನಿರ್ದೇಶನಗೊಂಡಿವೆ.
ಇಂಗ್ಲಿಷ್ ಮತ್ತು ಹಿಂದಿ ಸಿನಿಮಾಗಳಿಗೆ ಈ ಕೂಟವು ಪ್ರತಿವರ್ಷ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತದೆ. ಜ್ಯೂರಿಗಳ ತಂಡ ಅಂತಿಮಗೊಳಿಸಿದ ಸಿನಿಮಾಗಳಿಗೆ ಪ್ರಶಸ್ತಿ ನೀಡುವುದು ವಾಡಿಕೆ. ಆದರೆ, ಸಿನಿಮಾ ವಿಮರ್ಶಕರ ತಂಡ ಕನ್ನಡ, ತೆಲುಗು, ತಮಿಳು, ಮಲಯಾಳ, ಮರಾಠಿ, ಪಂಜಾಬಿ ಭಾಷೆಯ ತಲಾ ಮೂರು ಚಿತ್ರಗಳಿಗೆ ಪ್ರಶಸ್ತಿ ನೀಡುತ್ತಿರುವುದು ಇದೇ ಮೊದಲು. ಇದೇ 21ರಂದು ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ.
ಮಂಸೋರೆ ‘ನಾತಿಚರಾಮಿ’ ಚಿತ್ರ ನಿರ್ದೇಶಿಸಿದ್ದಾರೆ. ‘ಅಮ್ಮಚ್ಚಿಯೆಂಬ ನೆನಪು...’ ಸಿನಿಮಾ ನಿರ್ದೇಶಿಸಿರುವುದು ಚಂಪಾ ಪಿ. ಶೆಟ್ಟಿ. ಡಿ. ಸತ್ಯಪ್ರಕಾಶ್ ‘ಒಂದಲ್ಲಾ ಎರಡಲ್ಲಾ...’ ಸಿನಿಮಾ ನಿರ್ದೇಶಿಸಿದ್ದಾರೆ. ಈ ಮೂರು ಚಿತ್ರಗಳು ಕಳೆದ ವರ್ಷ ತೆರೆಕಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.