ADVERTISEMENT

ಹೊರಬಂತು ‘ಭೈರತಿ ರಣಗಲ್’ ಟೀಸರ್‌ 

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 1:29 IST
Last Updated 28 ಅಕ್ಟೋಬರ್ 2024, 1:29 IST
ಶಿವರಾಜಕುಮಾರ್‌
ಶಿವರಾಜಕುಮಾರ್‌   

ಶಿವರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಭೈರತಿ ರಣಗಲ್’ನ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿ, ನರ್ತನ್ ನಿರ್ದೇಶಿಸಿರುವ ಚಿತ್ರ ನವೆಂಬರ್‌ 15ರಂದು ತೆರೆಗೆ ಬರಲಿದೆ.

ಶಿವರಾಜಕುಮಾರ್‌ ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣಿ ಧೂಳಿನ ವಿರುದ್ಧ ಹೋರಾಟ ನಡೆಸುತ್ತಾರೆ ಎಂಬ ಸುಳಿವನ್ನು ಟೀಸರ್‌ ನೀಡುತ್ತಿದೆ. ಅವರು ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಟೀಸರ್‌ನಿಂದ ಗೊತ್ತಾಗುತ್ತಿದೆ. 

ನರ್ತನ್ ಹಾಗೂ ಶಿವರಾಜಕುಮಾರ್‌ ಅವರ ಕಾಂಬಿನೇಶನ್‌ನಲ್ಲಿ ಬಂದಿದ್ದ ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಈ ಚಿತ್ರ. ಹೀಗಾಗಿ ಕಥೆಯ ಕುರಿತು ನಿರೀಕ್ಷೆ ಹೆಚ್ಚಿದೆ. ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಛಾಯಾಚಿತ್ರಗ್ರಹಣ, ಆಕಾಶ್ ಹಿರೇಮಠ ಸಂಕಲನ ಚಿತ್ರಕ್ಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.