ಬೆಂಗಳೂರು: ಚಂದನವನದ ಹಿರಿಯ ನಿರ್ಮಾಪಕ ಬಿ.ವಿಜಯ್‌ಕುಮಾರ್ (63) ಅವರು ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ದಿವಂಗತ ನಟ ವಿಷ್ಣುವರ್ಧನ್ ಅವರಿಗೆ ಆಪ್ತರಾಗಿದ್ದ ವಿಜಯ್‌ಕುಮಾರ್, ‘ಲಯನ್ ಜಗಪತಿ ರಾವ್’, ‘ಸಿಂಹಾದ್ರಿಯ ಸಿಂಹ’, ‘ಅವತಾರ ಪುರುಷ’, ‘ಜಗದೇಕ ವೀರ’ ಸೇರಿದಂತೆ 15ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು, ಕರ್ನಾಟಕ ರೇಷ್ಮೆ ಮಂಡಳಿಯ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಚಿತ್ರರಂಗದ ಜೊತೆಗೆ ರಾಜಕೀಯದಲ್ಲೂ ವಿಜಯ್‌ಕುಮಾರ್ ಸಕ್ರಿಯರಾಗಿದ್ದರು.
‘ವಿಜಯ್‌ಕುಮಾರ್ ಅವರ ನಿಧನ ಚಿತ್ರರಂಗಕ್ಕೆ ದೊಡ್ಡ ನಷ್ಟ. ವಿಷ್ಣುವರ್ಧನ್ ಅವರ ಅತ್ಯಾಪ್ತರಾಗಿದ್ದ ಅವರು, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರೂ ಆಗಿದ್ದರು. ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದ ಅವರು ಜನಾನುರಾಗಿ’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.