ADVERTISEMENT

ಸಿನಿ ಸುದ್ದಿ | ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಕಾಯಿಲೆಯ ಕಥೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 0:12 IST
Last Updated 17 ಅಕ್ಟೋಬರ್ 2024, 0:12 IST
ಮಹೇಶ್‌ ಗೌಡ
ಮಹೇಶ್‌ ಗೌಡ   

ಈ ಹಿಂದೆ ರಾಜ್‌ ಬಿ. ಶೆಟ್ಟಿ ಅಭಿನಯದ ‘ಮಹಿರಾ’ ಸಿನಿಮಾವನ್ನು ನಿರ್ದೇಶಿಸಿದ್ದ ಮಹೇಶ್ ಗೌಡ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದೊಂದಿಗೆ ಮತ್ತೆ ಸಕ್ರಿಯರಾಗಿದ್ದಾರೆ. ಚಿತ್ರದ ಪೋಸ್ಟರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಈ ಚಿತ್ರದಲ್ಲಿ ನಿರ್ದೇಶನ, ನಿರ್ಮಾಣದ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. 

‘ಚಿತ್ರದ ಶೀರ್ಷಿಕೆ ಕೇಳಿದರೆ ಕಲಾತ್ಮಕ ಚಿತ್ರ ಅನ್ನಿಸಬಹುದು. ಆದರೆ ಇದು ಸಂಪೂರ್ಣ ಕಮರ್ಷಿಯಲ್‌ ಸಿನಿಮಾ. ವಿಟಿಲಿಗೋ ಅಂದರೆ, ತೊನ್ನಿನ ಸಮಸ್ಯೆ ಕುರಿತಾದ ಕಥೆ ಹೊಂದಿರುವ ಚಿತ್ರವಿದು. ಸಾಮಾನ್ಯವಾಗಿ ಇಂಥ ಕಥಾ ಹಂದರದ ಯಾವುದೇ ಸಿನಿಮಾದಲ್ಲಿ ಪಾತ್ರಧಾರಿಗಳು ಮೇಕಪ್ ಮೂಲಕ ಅದಕ್ಕೆ ಜೀವ ತುಂಬುತ್ತಾರೆ. ಆದರೆ ನಾನೇ ಸ್ವತಃ ಆ ಸಮಸ್ಯೆ ಹೊಂದಿರುವುದರಿಂದ ಪಾತ್ರ ನಿರ್ವಹಿಸಿದ್ದೇನೆ’ ಎಂದರು ಮಹೇಶ್‌ ಗೌಡ. 

ರೊಮ್ಯಾಂಟಿಕ್ ಶೈಲಿಯಲ್ಲಿ ಸಾಗುವ ಈ ಚಿತ್ರದಲ್ಲಿ ಹಾಸ್ಯಕ್ಕೂ ಕೊರತೆಯಿಲ್ಲ. ನಗಿಸುತ್ತಲೇ ಅಳಿಸುವ, ಬಹುಕಾಲ ಕಾಡುವ, ಎಲ್ಲ ವಯೋಮಾನದ, ಅಭಿರುಚಿಗಳ ಪ್ರೇಕ್ಷಕರಿಗೂ ಇಷ್ಟವಾಗುವ ಚಿತ್ರವಿದು ಎಂದಿದೆ ಚಿತ್ರತಂಡ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.