ADVERTISEMENT

'ಕಾಶ್ಮೀರ್‌ ಫೈಲ್ಸ್‌ ವಿರೋಧಿಸಿದ್ದ ಇಸ್ರೇಲ್‌ನ ನಿರ್ದೇಶಕನ ಬಗ್ಗೆ ತನಿಖೆಯಾಗಲಿ'

ಪಿಟಿಐ
Published 30 ನವೆಂಬರ್ 2022, 15:56 IST
Last Updated 30 ನವೆಂಬರ್ 2022, 15:56 IST
'ಕಾಶ್ಮೀರ್‌ ಫೈಲ್ಸ್‌
'ಕಾಶ್ಮೀರ್‌ ಫೈಲ್ಸ್‌    

ಜಮ್ಮು:ವಿವೇಕ್‌ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರವು ಅಸಭ್ಯ, ಕೀಳು ಅಭಿರುಚಿಯ ಚಿತ್ರ ಎಂದು ಹೇಳಿದ್ದ ಇಸ್ರೇಲ್‌ನ ಚಿತ್ರ ನಿರ್ದೇಶಕನಾಡವ್ ಲ್ಯಾಪಿಡ್‌ ಬಗ್ಗೆ ತನಿಖೆ ನಡೆಸಬೇಕು ಎಂದು ನಿರ್ದೇಶಕ ಅಶೋಕ್ ಪಂಡಿತ್ ಆಗ್ರಹಿಸಿದ್ದಾರೆ.

ಇಸ್ರೇಲ್‌ನ ಚಿತ್ರ ನಿರ್ದೇಶಕ ನಾಡವ್ ಲ್ಯಾಪಿಡ್‌ ಅವರನ್ನು ಗೋವಾದ ಚಲನಚಿತ್ರೋತ್ಸವದಲ್ಲಿ ಅಂತರರಾಷ್ಟ್ರೀಯತೀರ್ಪುಗಾರರನ್ನಾಗಿ ಆಯ್ಕೆ ಮಾಡಿದ್ದರ ಬಗ್ಗೆ ತನಿಖೆ ಮಾಡಬೇಕು ಎಂದು ಪಂಡಿತ್ ಒತ್ತಾಯಿಸಿದ್ದಾರೆ.

‘ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರವು ಅಸಭ್ಯ, ಕೀಳು ಅಭಿರುಚಿಯ ಚಿತ್ರ. ಪ್ರಚಾರದ ಉದ್ದೇಶದ ಈ ಚಿತ್ರವು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಸೂಕ್ತವಾದುದಲ್ಲ’ ಎಂದು ಐಎಫ್‌ಎಫ್‌ಐ ಅಂತರರಾಷ್ಟ್ರೀಯ ಸ್ಪರ್ಧೆ ವಿಭಾಗದ ತೀರ್ಪುಗಾರರಾದ ಇಸ್ರೇಲ್‌ನ ನಾಡವ್ ಲ್ಯಾಪಿಡ್‌ ಹೇಳಿದ್ದರು.

ADVERTISEMENT

ಈಪ್ರಸಂಗ ಗೋವಾದಲ್ಲಿ ನಡೆದಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ನಡೆದಿತ್ತು.

ಲ್ಯಾಪಿಡ್‌ರನ್ನುಅಂತರರಾಷ್ಟ್ರೀಯ ತೀರ್ಪುಗಾರರನ್ನಾಗಿ ಮಾಡಿದ್ದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪಂಡಿತ್ ಒತ್ತಾಯಿಸಿದ್ದಾರೆ. ಲ್ಯಾಪಿಡ್ ಹಿನ್ನೆಲೆ ನೋಡದೇ ಆಯ್ಕೆ ಮಾಡಿದ್ದ ಹೊಣೆಯನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವೇ ಹೊರಬೇಕು. ಇದರ ಹಿಂದೆ ದೊಡ್ಡ ಸಂಚಿದೆ ಎಂದು ಅವರು ಆಗ್ರಹಿಸಿದ್ದಾರೆ.

ಅಶೋಕ್ ಪಂಡಿತ್ ಅವರು ಮನಮೋಹನ್ ಸಿಂಗ್ ಅವರ ಜೀವನಾಧಾರಿತವಾದ ‘ದಿ ಆಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

‘ದಿ ಕಾಶ್ಮೀರ್ ಫೈಲ್ಸ್‌ ಚಿತ್ರ ಸತ್ಯಕ್ಕೆ ದೂರವಾಗಿದ್ದು ಎಂದು ಯಾರಾದರೂ ಸಾಬೀತು ಪಡಿಸಿದರೆ ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ‘ ಎಂದು ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಕೂಡ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.