ಬೆಂಗಳೂರು: ಹಾರರ್ ಸಿನಿಮಾ ಪ್ರಿಯರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ಒಬ್ಬರೇ ಕುಳಿತುಕೊಂಡು ಹಾಲಿವುಡ್‌ನ ಅತ್ಯಂತ ಭಯಾನಕ 13 ಚಿತ್ರಗಳನ್ನು ಹತ್ತು ದಿನದಲ್ಲಿ ನೋಡಿದರೆ ಅಂತವರಿಗೆ 1300 ಯುಎಸ್ ಡಾಲರ್ (95ಸಾವಿರ ರೂಪಾಯಿ) ಬಹುಮಾನ ನೀಡುವುದಾಗಿ ಫೈನಾನ್ಸ್ ಬುಜ್ ಕಂಪನಿ ಘೋಷಿಸಿದೆ.
ಫೈನಾನ್ಸ್ ಬುಜ್‌ನ ಈ ನಿರ್ಧಾರಕ್ಕೆ ಕಾರಣ ಏನೆಂದರೆ, ಹಾರರ್ ಸಿನಿಮಾಗಳನ್ನು ನೋಡುವಾಗ ನೋಡುಗನ ಹೃದಯ ಬಡಿತದ ಮಟ್ಟ ಯಾವ ರೀತಿ ಇರುತ್ತದೆ ಹಾಗೂ ಹೇಗಿರುತ್ತದೆ ಎಂಬುದನ್ನು ಪತ್ತೆ ಹಚ್ಚಬೇಕಿದೆಯಂತೆ.
ಇದಕ್ಕಾಗಿ ವೀಕ್ಷಕರಿಗೆ ‘ಫಿಟ್‌ಬಿಟ್‘ ಯಂತ್ರವನ್ನು ನೀಡುವುದಾಗಿ ಅದು ಹೇಳಿದ್ದು, ಸೆಪ್ಟೆಂಬರ್ 26 ರಂದು ಇದಕ್ಕಾಗಿ ಆನ್‌ಲೈನ್ ಅರ್ಜಿ ತೆಗೆದುಕೊಳ್ಳಲಿದ್ದು ಅಕ್ಟೋಬರ್ 1 ರವೇಳೆಗೆ ವಿಜೇತರನ್ನು ಘೋಷಣೆ ಮಾಡಲಾಗುತ್ತದೆಯಂತೆ.
ಅತ್ಯಂತ ಭಯಾನಕ ಚಿತ್ರಗಳನ್ನು ಒಬ್ಬರೇ ಕುಳಿತುಕೊಂಡು ವೀಕ್ಸಿಸಿ, ಯಾರ ಹೃದಯ ಬಡಿತ ಅತ್ಯಂತ ಸಾಮಾನ್ಯವಾಗಿದೆಯೋ ಅಂತವನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆಯಂತೆ.
ಅಲ್ಲದೇ ಫೈನಾನ್ಸ್ ಬುಜ್ ಕಂಪನಿ, ಕಡಿಮೆ ಬಜೆಟ್ ಹಾರರ್ ಸಿನಿಮಾಗಳಿಗೂ ಹಾಗೂ ಭಾರಿ ಬಜೆಟ್ ಹಾರರ್ ಸಿನಿಮಾಗಳಿಗೂ ಪ್ರೇಕ್ಷಕನಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ ಎಂಬುದರ ಅಧ್ಯಯನವನ್ನೂ ಇದರಿಂದ ಮಾಡಲಿದೆ ಎನ್ನಲಾಗಿದೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ನೋಡಬೇಕಾದ ಹಾಲಿವುಡ್ ಹಾರರ್ ಸಿನಿಮಾಗಳು
1) ಸಾ Saw
2) ದಿ ಅಮಿಟಿವಿಲ್ಲೆ ಹಾರರ್ The Amityville Horror
3) ಅ ಕ್ವೈಟ್ ಪ್ಲೇಸ್ A Quiet Place
4) ಅ ಕ್ವೈಟ್ ಪ್ಲೇಸ್ ಪಾರ್ಟ್ 2 A Quiet Place Part II
5) ಕ್ಯಾಂಡಿಮ್ಯಾನ್ Candyman
6) ಇನ್‌ಸಿಡಿಯಸ್ Insidious
7) ದಿ ಬ್ಲೇರ್ ವಿಚ್ ಪ್ರೊಜೆಕ್ಟ್ The Blair Witch Project
8) ಸಿನ್ನಿಸ್ಟರ್ Sinister
3) ಗೆಟ್ ಔಟ್ Get Out
10) ದಿ ಪರ್ಗ್ The Purge
11) ಹಾಲೋವಿನ್ Halloween (2018)
12) ಪ್ಯಾರಾನಾರ್ಮಲ್ ಆಕ್ಟಿವಿಟಿ Paranormal Activity
13) ಅನ್ನಾಬೆಲ್ಲೆ Annabelle
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.