ADVERTISEMENT

ಗಾನ ಗಂಧರ್ವನ ಮೊದಲ ವರ್ಷದ ಪುಣ್ಯತಿಥಿ: ಅಭಿಮಾನಿಗಳಿಂದ ಬಾಲಸುಬ್ರಹ್ಮಣ್ಯಂ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 5:53 IST
Last Updated 25 ಸೆಪ್ಟೆಂಬರ್ 2021, 5:53 IST
ಬಾಲಸುಬ್ರಹ್ಮಣ್ಯಂ
ಬಾಲಸುಬ್ರಹ್ಮಣ್ಯಂ   

ಗಾನ ಗಾರುಡಿಗ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಮೊದಲ ವರ್ಷದ ಪುಣ್ಯತಿಥಿಯಾದ ಇಂದು (ಸೆ.25) ಅಭಿಮಾನಿಗಳು ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.

ಎಸ್‌ಪಿಬಿ ನಿಧನರಾಗಿ ಇಂದಿಗೆ ಒಂದು ವರ್ಷವಾಗಿದೆ. ಮೊದಲ ಪುಣ್ಯತಿಥಿಯ ಈ ದಿನ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷ ಗೌರವಗಳೊಂದಿಗೆ ಸ್ಮರಿಸುತ್ತಿದ್ದಾರೆ.

ಎಸ್‌ಪಿಬಿ ಹಾಡಿರುವ ತಮ್ಮ ನೆಚ್ಚಿನ ಹಾಡುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಎಸ್‌ಪಿಬಿ ಮಾತನಾಡಿರುವ ವಿಡಿಯೊ ತುಣುಕುಗಳನ್ನು ಶೇರ್ ಮಾಡುತ್ತಿದ್ದಾರೆ. ಇಂದು ಬೆಳಗ್ಗೆಯಿಂದ ಅವರ ಅಭಿಮಾನಿಗಳು #SPBalasubrahmanyam ಎಂಬ ಹ್ಯಾಶ್‌ಟ್ಯಾಗ್‌ ಹಾಕಿ ಟ್ರೆಂಡ್‌ ಮಾಡುತ್ತಿದ್ದಾರೆ.

ADVERTISEMENT

ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜ ಎಂದೇ ಖ್ಯಾತರಾಗಿದ್ದ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರು 2020ರ ಸೆಪ್ಟೆಂಬರ್‌ 25ರಂದು ನಿಧನರಾದರು. ಕೋವಿಡ್‌ ಸೋಂಕಿನಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಭಾರತ ಸೇರಿದಂತೆ ವಿದೇಶದ ನಾನಾ ಕಡೆ ನೆಲೆಸಿರುವ ಅಭಿಮಾನಿಗಳು ಇಂದು ಅವರನ್ನು ಸ್ಮರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.