ADVERTISEMENT

ಸೂರರೈ ಪೊಟ್ರು ರಿಮೇಕ್; ಅಭಿಮಾನಿಗಳೇ 'ಟೈಟಲ್ ಸಜೆಸ್ಟ್ ಮಾಡಿ' ಎಂದ ಅಕ್ಷಯ್ ಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಏಪ್ರಿಲ್ 2022, 10:34 IST
Last Updated 25 ಏಪ್ರಿಲ್ 2022, 10:34 IST
ಅಕ್ಷಯ್ ಕುಮಾರ್‌
ಅಕ್ಷಯ್ ಕುಮಾರ್‌   

ತಮಿಳಿನ ಸೂಪರ್‌ಹಿಟ್‌ ಸಿನಿಮಾ 'ಸೂರರೈ ಪೊಟ್ರು' ಹಿಂದಿಗೆ ರಿಮೇಕ್‌ ಆಗುತ್ತಿದೆ. ಮೂಲ ಚಿತ್ರದಲ್ಲಿ ಸೂರ್ಯ ನಿರ್ವಹಿಸಿರುವ ಪಾತ್ರವನ್ನು ಹಿಂದಿ ಅವತರಣಿಕೆಯಲ್ಲಿ ಖ್ಯಾತ ನಟ ಅಕ್ಷಯ್ ಕುಮಾರ್‌ ನಿಭಾಯಿಸಲಿದ್ದಾರೆ. ಅವರಿಗೆ ನಾಯಕಿಯಾಗಿ ರಾಧಿಕಾ ಮದನ್‌ ಬಣ್ಣ ಹಚ್ಚಲಿದ್ದಾರೆ.

ಸದ್ಯ ಚಿತ್ರೀಕರಣ ಆರಂಭವಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊ ತುಣುಕೊಂದನ್ನುಅಕ್ಷಯ್‌ ಹಂಚಿಕೊಂಡಿದ್ದಾರೆ. ಶೂಟಿಂಗ್‌ ಆರಂಭಕ್ಕೂ ಮುನ್ನ ರಾಧಿಕಾ ಮದನ್‌ ಅವರು ತೆಂಗಿನ ಕಾಯಿ ಒಡೆಯುತ್ತಿರುವುದನ್ನು ಅಕ್ಷಯ್‌ ಹಾಗೂ ನಿರ್ದೇಶಕಿ ಸುಧಾ ಕೊಂಗಾರ ನೋಡುತ್ತಿರುವುದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೆಯಾಗಿರುವ ಈವಿಡಿಯೊದಲ್ಲಿದೆ.

'ಮಂಗಳಕರ ರೀತಿಯಲ್ಲಿ ತೆಂಗಿನಕಾಯಿ ಒಡೆದು, ಸಣ್ಣ ಪ್ರಾರ್ಥನೆಯೊಂದಿಗೆ ಇನ್ನೂ ಹೆಸರಿಡದ ನಮ್ಮ ಕನಸಿನ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದೇವೆ. ನೀವು ಯಾವುದೇ ಶೀರ್ಷಿಕೆಯನ್ನು ಸಲಹೆ ನೀಡುವುದಿದ್ದರೆ ಹಂಚಿಕೊಳ್ಳಿ. ನಿಮ್ಮ ಶುಭಾಶಯಗಳನ್ನೂ ತಿಳಿಸಿ' ಎಂದು ವಿಡಿಯೊ ಜೊತೆಗೆ ಬರೆದುಕೊಂಡಿದ್ದಾರೆ.

ADVERTISEMENT

ನಟಿ ರಾಧಿಕಾ ಮದನ್‌, ನಿರ್ದೇಶಕಿ ಸುಧಾ ಕೊಂಗಾರ, ನಟಿ ಜ್ಯೋತಿಕಾ, ನಟ ಸೂರ್ಯ ಅವರಷ್ಟೇ ಅಲ್ಲದೆ,‘ಸೂರರೈ ಪೊಟ್ರು’ ಸಿನಿಮಾಗೆ ಸ್ಫೂರ್ತಿಯಾದ, 'ಏರ್‌ ಡೆಕ್ಕನ್‌' ಸಂಸ್ಥಾಪಕ ಕ್ಯಾಪ್ಟನ್‌ ಜಿ.ಆರ್‌.ಗೋಪಿನಾಥ್‌ ಅವರನ್ನೂ ಅಕ್ಷಯ್‌ ಟ್ಯಾಗ್‌ ಮಾಡಿದ್ದಾರೆ.

ಮೂಲ ಸಿನಿಮಾದಲ್ಲಿ ನಟ ಸೂರ್ಯ ಅಭಿನಯಕ್ಕೆ ಪ್ರೇಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.