ಮುಂಬೈ: ಟಾಲಿವುಡ್ ನಟ ವರುಣ್ ತೇಜ್ ಅವರ ಮುಂಬರುವ ಆ್ಯಕ್ಷನ್ ಡ್ರಾಮಾ ಚಿತ್ರದಲ್ಲಿ ಬಾಲಿವುಡ್ ನಟಿ ಮಾನುಷಿ ಚಿಲ್ಲರ್ ನಟಿಸಲಿದ್ದಾರೆ ಎಂದು ಸೋನಿ ಪಿಕ್ಚರ್ಸ್ ಇಂಟರ್ ನ್ಯಾಷನಲ್ ಪ್ರೊಡಕ್ಷನ್ಸ್ ಶುಕ್ರವಾರ ಪ್ರಕಟಿಸಿದೆ.
ಭಾರತದ ಅತಿದೊಡ್ಡ ವಾಯುಪಡೆಯ ಆಕ್ಷನ್ ಚಿತ್ರ ಇದಾಗಿದ್ದು, ತೆಲುಗು–ಹಿಂದಿ ನಾಟಕಗಳ ನೈಜ ಘಟನೆಗಳಿಂದ ಪ್ರೇರಿತಗೊಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಶಕ್ತಿ ಪ್ರತಾಪ್ ಸಿಂಗ್ ಹದಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ.
ಚಿತ್ರದಲ್ಲಿ ವರುಣ್ ತೇಜ್, ಭಾರತೀಯ ವಾಯುಪಡೆಯ ಪೈಲಟ್ ಆಗಿ ಕಾಣಿಸಿಕೊಳ್ಳಲಿದ್ದು, ಚಿಲ್ಲರ್ ಅವರು ರಾಡಾರ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಮಾಜಿ ವಿಶ್ವ ಸುಂದರಿ ಚಿಲ್ಲರ್, ಭಾರತೀಯ ವಾಯುಪಡೆಯ ಅಧಿಕಾರಿಗಳ ಜೀವನ ಮತ್ತು ಪ್ರಯಾಣವನ್ನು ಆಳವಾಗಿ ತಿಳಿದುಕೊಳ್ಳಲು ಸಹಾಯ ಮಾಡುವ ಈ ಚಿತ್ರದ ಭಾಗವಾಗಲು ನಾನು ರೋಮಾಂಚನಗೊಂಡಿದ್ದೇನೆ ಎಂದು ಹೇಳಿದ್ದಾರೆ.
‘ಸೋನಿ ಪಿಕ್ಚರ್ಸ್ ಇಂಟರ್ ನ್ಯಾಷನಲ್ ಪ್ರೊಡಕ್ಷನ್ಸ್ ಮತ್ತು ರಿನೈಸಾನ್ಸ್ ಪಿಕ್ಚರ್ಸ್‌ನೊಂದಿಗೆ ಚಿತ್ರದ ಅದ್ಭುತ ದೃಶ್ಯದ ಭಾಗವಾಗಿ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನನ್ನ ನಿರ್ದೇಶಕರಿಗೆ ನಾನು ಆಭಾರಿಯಾಗಿದ್ದೇನೆ. ಭಾರತೀಯ ವಾಯುಪಡೆಯಲ್ಲಿನ ಅಧಿಕಾರಿಗಳ ಜೀವನ ಮತ್ತು ಪ್ರಯಾಣವನ್ನು ತಿಳಿಯಲು ನಾನು ಉತ್ಸುಕಳಾಗಿದ್ದು, ವರುಣ್ ತೇಜ್ ಅವರೊಂದಿಗೆ ಪರದೆ ಹಂಚಿಕೊಳ್ಳಲು ಇದು ಉತ್ತೇಜಕ ಆರಂಭವಾಗಿದೆ‘ ಎಂದು ಚಿಲ್ಲರ್ ಹೇಳಿಕೊಂಡಿದ್ದಾರೆ.
ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾದ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.
ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಶನಲ್ ಪ್ರೊಡಕ್ಷನ್ಸ್ ಮತ್ತು ರಿನೈಸಾನ್ಸ್ ಪಿಕ್ಚರ್ಸ್‌ನ ಸಂದೀಪ್ ಮುದ್ದರವರಿಂದ ಸಿನಿಮಾ ನಿರ್ಮಾಣವಾಗಲಿದೆ. ನಂದಕುಮಾರ್ ಅಬ್ಬಿನೇನಿ ಮತ್ತು ಗಾಡ್ ಬ್ಲೆಸ್ ಎಂಟರ್‌ಟೈನ್‌ಮೆಂಟ್ ಸಹ-ನಿರ್ಮಾಣ ಮಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.