’ಗಗನ ಕುಸುಮ’ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಬಿಡುಗಡೆಗೊಂಡಿತು. ಎಸ್.ಎಸ್.ಕ್ರಿಯೇಶನ್ಸ್ ಅಡಿಯಲ್ಲಿ ಆರ್.ಶೇಖರನ್ ನಿರ್ಮಾಣ ಮಾಡುವ ಜತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಗೇಂದ್ರ ಕುಮಾರ್ ಜೈನ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಹಾಗೂ ಸಣ್ಣ ರೋಲ್‌ದಲ್ಲಿ ಕಾಣಿಸಿಕೊಂಡಿದ್ದಾರೆ.
ಹಿರಿಯ ನಿರ್ಮಾಪಕ ಮತ್ತು ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ನಿರ್ಮಾಪಕ ಹುಟ್ಟಿಕೊಂಡರೆ ನೂರಾರು ಜನರಿಗೆ ಕೆಲಸ ಸಿಗುತ್ತದೆ. ಮೊದಲು ಅವರು ಉಳಿಯಬೇಕು. ಟೈಟಲ್ ಚೆನ್ನಾಗಿದೆ. ಸಿನಿಮಾವು ಯಶಸ್ಸು ಗಳಿಸಲಿ ಅಂತ ಶುಭ ಹಾರೈಸಿದರು.
ಅತಿಥಿಯಾಗಿ ಆಗಮಿಸಿದ್ದ ನಟ,ನಿರ್ದೇಶಕ ನಿಖಿಲ್‌ಮಂಜು ಹೇಳುವಂತೆ ಪ್ರಸಕ್ತ ಚಿತ್ರರಂಗದಲ್ಲಿ ನಡೆಯುತ್ತಿರುವ ಎರಡು ಸತ್ಯಗಳನ್ನು ತೆರೆದಿಟ್ಟು, ಸದ್ಯದ ಪರಿಸ್ಥಿತಿಯಲ್ಲಿ ಶಕ್ತಿಯಾಗಿ ಪರ್ಯಾಯ ಸಿನಿಮಾಗಳು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.
ನಿರ್ದೇಶಕರು ಮಾತನಾಡಿ ಸಿನಿಮಾದೊಳಗೊಂದು ಸಿನಿಮಾದ ಕಥೆಯನ್ನು ಹೇಳಲಾಗಿದೆ. ಅಂದು ಚಿತ್ರಗಳ ಕೆಲಸ ನಡೆಯುತ್ತಿದ್ದ ಸಮಯದಲ್ಲಿ ನಿರ್ಮಾಪಕರು, ನಿರ್ದೇಶಕರ ವರ್ತನೆಗಳನ್ನು ನೋಡಿ ಅದನ್ನೆ ಚಿತ್ರಕತೆಗೆ ಬಳಸಲಾಗಿದೆ. ನಾಯಕಿಯ ಧೋರಣೆಗೆ ಬೇಸತ್ತ ನಿರ್ದೇಶಕ ಹಳ್ಳಿಯ ಹುಡುಗಿಯೊಬ್ಬಳನ್ನು ನಾಯಕಿಯಾಗಿ ಮಾಡಿ ಹೇಗೆ ಯಶಸ್ಸು ಗಳಿಸುತ್ತಾನೆ ಎನ್ನುವುದು ಕಥಾ ಹಂದರ. ಚಿತ್ರದಲ್ಲಿ ವೈನ್, ವುಮೆನ್, ವೆಲ್ತ್ ಬಳಸದೆ ಇರುವುದು ವಿಶೇಷ ಎಂದರು.
ತಾರಾಗಣದಲ್ಲಿ ಎಸ್.ಕೆ.ಪ್ರಕಾಶ್ ಸಣ್ಣಕ್ಕಿ, ದಿನೇಶ್‌ಗೌಡ, ಕಾವ್ಯಪ್ರಕಾಶ್, ಆಶಾ, ಹರಣಿನಟರಾಜ್ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ನಿವೇದ್, ಛಾಯಾಗ್ರಹಣ ಸೂರ್ಯೋದಯ, ಸಂಕಲನ ಅಭಿಷೇಕ್‌ಯೋಗಿ, ನೃತ್ಯ ರಾಜ್‌ದೇವ್ ಅವರದಾಗಿದೆ. ನವೆಂಬೆರ್ ವೇಳಗೆ ಚಿತ್ರವು ತೆರೆಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.