ADVERTISEMENT

ಜಾತಿ ನಿಂದನೆ ಪದ ಬಳಕೆ: ನಟಿ ಯುವಿಕಾ ಚೌಧರಿಗೆ ಮಧ್ಯಂತರ ಜಾಮೀನು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2021, 9:29 IST
Last Updated 19 ಅಕ್ಟೋಬರ್ 2021, 9:29 IST
ಯುವಿಕಾ ಚೌಧರಿ
ಯುವಿಕಾ ಚೌಧರಿ   

ಹರಿಯಾಣ: ಜಾತಿ‌ ನಿಂದನೆಯ ಆರೋಪದ ಹಿನ್ನೆಲೆ ಬಂಧನಕ್ಕೊಳಗಾಗಿದ್ದ ಬಾಲಿವುಡ್‌ ನಟಿ ಯುವಿಕಾ ಚೌಧರಿ ಅವರಿಗೆ ಮಂಗಳವಾರ ಹರಿಯಾಣ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಯುವಿಕಾರನ್ನು ಬಂಧಿಸುವಂತೆ ಆಗ್ರಹಿಸಿ ರಜತ್‌ ಕಲ್ಸನ್‌ ಎಂಬುವವರು ಹರಿಯಾಣದ ಪೊಲೀಸ್‌ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯಡಿ (ಎಸ್‌ಸಿ / ಎಸ್‌ಟಿ) ಪ್ರಕರಣ ದಾಖಲಿಸಿದ್ದರು. ಆದರಂತೆ ಸೋಮವಾರ ಯುವಿಕಾರನ್ನು ಪೊಲೀಸರು ಬಂಧಿಸಿದ್ದರು.

ಪ್ರಕರಣ ಸಂಬಂಧ ಮಂಗಳವಾರ ವಿಚಾರಣೆ ನಡೆಸಿದ ಹರಿಯಾಣ ಹೈಕೋರ್ಟ್‌, ನಟಿ ಯುವಿಕಾ ಚೌಧರಿಗೆ ಮಧ್ಯಂತರ ಜಾಮೀನು ನೀಡಿದೆ.

‘ಹೈಕೋರ್ಟ್ ನಿಯಮಗಳ ಪ್ರಕಾರ ನನ್ನ ಕಕ್ಷಿದಾರರು ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ’ ಎಂದು ನಟಿ ಯುವಿಕಾ ಚೌಧರಿ ಪರ ವಕೀಲ ಅಶೋಕ್ ಬಿಷ್ಣೋಯ್ ಹೇಳಿದರು.

ADVERTISEMENT

ಜಾತಿ‌ ನಿಂದನೆಯ ಆರೋಪ ಹೊತ್ತಿದ್ದ ನಟಿ ಯುವಿಕಾ ಚೌಧರಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕಳೆದ ಕೆಲ ದಿನಗಳ ಹಿಂದೆ ಟ್ವಿಟರ್‌ ಅಭಿಯಾನ ನಡೆಸಲಾಗಿತ್ತು.

‘ಓಂ ಶಾಂತಿ ಓಂ’ ಮತ್ತು ‘ದಿ ಶೌಕೀನ್ಸ್‌’ ಸಹಿತ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದ ಯುವಿಕಾ ಚೌಧರಿ, ವಿಡಿಯೊ ಬ್ಲಾಗ್ ಒಂದರಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಬಿಗ್ ಬಾಸ್ ಮಾಜಿ ಸ್ಪರ್ಧಿಯೂ ಆಗಿರುವ ಯುವಿಕಾ, ವಿಡಿಯೊದಲ್ಲಿ ಜಾತಿನಿಂದನೆ ಪದ ಬಳಸಿರುವುದು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಟ್ವಿಟರ್‌ನಲ್ಲಿ ಕ್ಷಮೆ ಕೋರುವ ಮೂಲಕ ಪದದ ಅರ್ಥ ಗೊತ್ತಿರಲಿಲ್ಲ ಎಂದು ಹೇಳಿಕೊಂಡಿದ್ದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.