ADVERTISEMENT

ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ ಪೂಣಚ್ಚ: ಖುಷಿ ಹಂಚಿಕೊಂಡ ಭುವನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2024, 4:37 IST
Last Updated 4 ಅಕ್ಟೋಬರ್ 2024, 4:37 IST
<div class="paragraphs"><p>ಹರ್ಷಿಕಾ ಪೂಣಚ್ಚ, ಭುವನ್‌</p></div>

ಹರ್ಷಿಕಾ ಪೂಣಚ್ಚ, ಭುವನ್‌

   

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ದಂಪತಿಗೆ ಹೆಣ್ಣು ಮಗು ಜನಿಸಿದೆ. 

ನಿನ್ನೆ (ಅ.3) ಹೆಣ್ಣು ಮಗು ಜನಿಸಿರುವ ಕುರಿತು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಗು ಮತ್ತು ತಾಯಿ ಹರ್ಷಿಕಾ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಭುವನ್‌ ತಿಳಿಸಿದ್ದಾರೆ. ಮಗುವಿಗೆ ‘ಚೈಕಾರ್ತಿ’ ಎಂದು ಹೆಸರಿಟ್ಟಿದ್ದಾರೆ.

ADVERTISEMENT

ಇತ್ತೀಚೆಗೆ ರವಿವರ್ಮನ ಚಿತ್ರಕಲೆಯನ್ನು ಆಧಾರವಾಗಿಟ್ಟುಕೊಂಡು ಬೇಬಿ ಬಂಪ್‌ ಫೋಟೊ ಶೂಟ್‌ ಮಾಡಿಸಿ ಹರ್ಷಿಕಾ ಸುದ್ದಿಯಾಗಿದ್ದರು.

ಕಳೆದ ಜುಲೈನಲ್ಲಿ ಕೊಡವ ಶೈಲಿಯ ಫೋಟೊಶೂಟ್‌ ಮಾಡಿಸಿ ಪೋಷಕರಾಗುತ್ತಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದರು.

ಹರ್ಷಿಕಾ ಮತ್ತು ಭುವನ್‌ ಇಬ್ಬರೂ ಕೊಡಗಿನ ಮೂಲದವರು. ಈ ಜೋಡಿ 2023 ಆಗಸ್ಟ್‌ 24ರಂದು ಮದುವೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.