ಅಭಿಪ್ರಾಯಗಳನ್ನು ಹತ್ತಿಕ್ಕುವ ಪ್ರಯತ್ನವಾಗಿ ರಾಜ್ಯದಲ್ಲಿ ವಿಚಾರವಾದಿಗಳ ಹತ್ಯೆ ನಡೆಯಿತು. ಹಾಗಾದರೆ ಬರವಣಿಗೆಯನ್ನೇ ನಿಲ್ಲಿಸಬೇಕಾ? ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿತು. ಇದೇ ವಿಷಯವನ್ನು ಇಟ್ಟುಕೊಂಡು ಎನ್.ಎಸ್.ರಾಹುಲ್ ಕಿರುಚಿತ್ರ ನಿರ್ಮಿಸಿದ್ದಾರೆ.
‘12:12’ ಸಿನಿಮಾದಲ್ಲಿ 12ಗಂಟೆ 12ನಿಮಿಷಕ್ಕೆ ನಡೆಯುವ ಒಂದು ಸನ್ನಿವೇಶವನ್ನು ಕಟ್ಟಿಕೊಡಲಾಗಿದೆ. ಲೇಖಕರ ಮನೆಗೆ ನುಗ್ಗುವ ಕೆಲವರು, ಅವರನ್ನು ಹತ್ಯೆ ಮಾಡಿ, ಪುಸ್ತಕಗಳನ್ನು ನಾಶ ಮಾಡುತ್ತಾರೆ. ಬರವಣಿಗೆಯನ್ನು ನಿಲ್ಲಿಸಬೇಕು ಎಂಬ ಸಂದೇಶ ಇರುವ ಪತ್ರವನ್ನು ಇಟ್ಟು ಹೋಗುತ್ತಾರೆ.
ಈ ಕತೆಯ ಎಳೆಯನ್ನು ಇಟ್ಟುಕೊಂಡು 7 ನಿಮಿಷದ ಚಿತ್ರ ನಿರ್ಮಿಸಲಾಗಿದೆ. ಈ ಕತೆಗೆ ಹಾರರ್ ರೂಪ ನೀಡಲಾಗಿದೆ.
ಸಿನಿಮಾ, ನೋಡುಗರ ಮನಸ್ಸನ್ನು ತಟ್ಟಬೇಕಾದರೆ ಸಂಭಾಷಣೆಯೇ ಬೇಕಿಲ್ಲ. ಕೆಲವೊಮ್ಮೆ ಅದರಲ್ಲಿರುವ ಕತೆ, ಇನ್ನು ಕೆಲವೊಮ್ಮೆ ಕತೆಯ ಹಿಂದಿರುವ ಸಂಗೀತ ಅಷ್ಟೇ ಸಾಕು. ಇದೇ ರೀತಿಯ ಒಂದು ಹೊಸ ಪ್ರಯತ್ನ ಇದರಲ್ಲಿದೆ. ಮೊಬೈಲ್‌ನಲ್ಲಿ ಇಯರ್ ಫೋನ್ ಬಳಸಿ ಸಿನಿಮಾ ನೋಡುವವರಿಗೆ ವಿಶೇಷವಾದ ಅನುಭವ ನೀಡಲಿದೆ. ಯೂಟ್ಯೂಬ್‌ನಲ್ಲಿ ಈ ಸಿನಿಮಾ ಈಗಾಗಲೇ 500ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
ನಿರ್ಮಾಣ–ವಿಐಸಿ ಪ್ರೈ.ಲಿಮಿಟೆಡ್
ನಟನೆ–ಅಜಯ್ ದತ್ತಾ.ಅಕ್ಷರಾ ಸುರೇಶ್, ಜೋಮನ್ ಜಾನ್, ಹರ್ಷಾ ಗೌಡ, ಆರ್ಟ್–ಮದನ್, ಮ್ಯೂಸಿಕ್–ರೋಹಿತ್ ಸೊವರ್.
ಲಿಂಕ್: https://youtu.be/RjhjSINeyzk
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.