ADVERTISEMENT

ನಟ ಧ್ರುವ ಸರ್ಜಾ ನೌಲಿ ಕ್ರಿಯಾ ಯೋಗ ಕಲಿತಿದ್ದು ಹೇಗೆ?

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 12:01 IST
Last Updated 26 ಫೆಬ್ರುವರಿ 2021, 12:01 IST
ಧ್ರುವ ಸರ್ಜಾ
ಧ್ರುವ ಸರ್ಜಾ   

ಬೆಂಗಳೂರು: ಪೊಗರು ಚಿತ್ರಕ್ಕಾಗಿ ದೈಹಿಕವಾಗಿ ಬಹಳಷ್ಟು ಪರಿಶ್ರಮಪಟ್ಟಿದ್ದ ನಟ ಧ್ರುವ ಸರ್ಜಾ, ಚಿತ್ರದ ಮೊದಲಾರ್ಧದಲ್ಲಿ ಬರುವ ಹಾಡೊಂದರಲ್ಲಿ ಮಲ್ಲಕಂಬದ ಮೇಲೆ ನೌಲಿ ಕ್ರಿಯಾ ಯೋಗ ಮಾಡಿ ಎಲ್ಲರ ಗಮನಸೆಳೆದಿದ್ದರು.

ಇದೀಗ, ಆ ಯೋಗಾಭ್ಯಾಸವನ್ನು ಧ್ರುವ ಸರ್ಜಾ ಅವರು ಕಲಿತ ಕುರಿತು ಮೇಕಿಂಗ್‌ ವಿಡಿಯೊವನ್ನು ಚಿತ್ರ ತಂಡವು ಬಿಡುಗಡೆಗೊಳಿಸಿದೆ. ಈ ಕುರಿತು ಮಾತನಾಡಿರುವ ಧ್ರುವ, ‘ಹಂತ ಹಂತವಾಗಿ ಹೇಗೆ ನಾನು ನೌಲಿಕ್ರಿಯಾ ಯೋಗವನ್ನು ಕಲಿತೆ ಎನ್ನುವುದು ಮೇಕಿಂಗ್‌ನಲ್ಲಿದೆ. ಆ ಒಂದು ಅಭ್ಯಾಸ ಕಲಿಯಲು 30–40 ದಿನ ತೆಗೆದುಕೊಂಡೆ. ರಾಜ್‌ಕುಮಾರ್‌ ಅವರು ಅಭ್ಯಾಸ ಮಾಡುತ್ತಿದ್ದ ಆ ಒಂದು ಭಾಗವನ್ನಷ್ಟೇ ನಾನು ಪ್ರಯತ್ನಿಸಿದ್ದೇನೆ ಅವರು ಮಾಡುವ ಎಲ್ಲ ಯೋಗವನ್ನು ನನಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ರಾಜ್‌ಕುಮಾರ್‌ ಅವರು ದೊಡ್ಡ ಇನ್‌ಸ್ಟಿಟ್ಯೂಷನ್‌. ಅದರಲ್ಲಿನ ಒಂದು ಪದವಷ್ಟೇ ನಾನು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT