ADVERTISEMENT

ಹೃತಿಕ್‌–ಸೈಫ್‌ ಮೋಡಿ: 100ಕ್ಕೂ ಹೆಚ್ಚು ದೇಶಗಳಲ್ಲಿ ‘ವಿಕ್ರಮ್ ವೇದಾ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 12:37 IST
Last Updated 15 ಸೆಪ್ಟೆಂಬರ್ 2022, 12:37 IST
ಪೋಸ್ಟರ್‌
ಪೋಸ್ಟರ್‌   

ಬೆಂಗಳೂರು: ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ‘ವಿಕ್ರಮ್ ವೇದಾ’ ಚಿತ್ರ 100ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡತಿಳಿಸಿದೆ.

ಉತ್ತರ ಅಮೆರಿಕ, ಬ್ರಿಟನ್‌, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ, ನ್ಯೂಜಿಲೆಂಡ್,ಜಪಾನ್, ರಷ್ಯಾ, ಪನಾಮ, ಪೆರು ದೇಶಗಳಲ್ಲಿ ಬಿಡುಗಡೆಯಾಗಲಿದೆ. ಹಾಗೇ ಆಫ್ರಿಕಾ ಖಂಡದಲ್ಲಿ 25 ದೇಶಗಳು, ಲ್ಯಾಟಿನ್ ಅಮೆರಿಕದ 27 ರಾಷ್ಟ್ರಗಳು ಮತ್ತುಯುರೋಪ್‌ನ 22 ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಅರಬ್‌ ದೇಶಗಳು ಸೇರಿದಂತೆ ಒಟ್ಟು ನೂರು ದೇಶಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಇದುವರೆಗೂ ಬಾಲಿವುಡ್‌ ಚಿತ್ರಗಳು ಬಿಡುಗಡೆಯಾಗದಿರುವ ದೇಶಗಳಲ್ಲೂ ಚಿತ್ರ ತೆರೆ ಕಾಣಲಿದೆ.

ADVERTISEMENT

ಕ್ರೈಮ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ,ಮೈನವಿರೇಳಿಸುವ ಆ್ಯಕ್ಷನ್‌ ಸೀಕ್ವೆನ್ಸ್‌ಗಳು, ಹೊಡೆದಾಟದ ದೃಶ್ಯಗಳಿರುವ ಈ ಸಿನಿಮಾ ಬಾಲಿವುಡ್‌ನಲ್ಲಿ ನಿರೀಕ್ಷೆ ಮೂಡಿಸಿದೆ. ಸ್ಟಾರ್‌ ನಟರಾದ ಸೈಫ್ ಹಾಗೂ ಹೃತಿಕ್ ಮುಖಾಮುಖಿಯಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ಈಗಾಗಲೇ ಚಿತ್ರದಮೂರು ನಿಮಿಷಗಳ ಟ್ರೇಲರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

‘ವಿಕ್ರಮ್‌ ವೇದ’ ತಮಿಳಿನ ರಿಮೇಕ್‌ ಚಿತ್ರ. ಮೂಲ ಚಿತ್ರವನ್ನು ನಿರ್ದೇಶಿಸಿದ ಪುಷ್ಕರ್ ಮತ್ತು ಗಾಯತ್ರಿ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೆಪ್ಟೆಂಬರ್ 30ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಹೃತಿಕ್ ರೋಷನ್ ವೇದ ಪಾತ್ರದಲ್ಲಿ, ಸೈಫ್ ಅಲಿ ಖಾನ್ ವಿಕ್ರಮ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಭೂಷಣ್ ಕುಮಾರ್, ಎಸ್.ಶಶಿಕಾಂತ್ ಚಿತ್ರದ ನಿರ್ಮಾಪಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.