ಬೆಂಗಳೂರು:'ಡಿಂಪಲ್ ಕ್ವೀನ್'ರಚಿತಾ ರಾಮ್ ವಿರುದ್ಧ 'ಫೈರಿಂಗ್ ಸ್ಟಾರ್' ಹುಚ್ಚ ವೆಂಕಟ್ ಗರಂ ಆಗಿದ್ದು, ರಚಿತಾ ಇದೆಲ್ಲಾ ನಿನಗೆ ಬೇಕಿತ್ತಾ? ಎಂದು ಕೇಳಿದ್ದಾರೆ.
ಹೌದು, ರಚಿತಾ ರಾಮ್ ‘ಧಮ್‘ ಎಳೆದು ಕಿಸ್ ಮಾಡಿರುವುದಕ್ಕೆ ವೆಂಕಟ್ ಕೋಪಗೊಂಡಿದ್ದಾರೆ.
‘ಏಕ್ ಲವ್ ಯಾ’ ಸಿನಿಮಾದ ಟೀಸರ್‌ನಲ್ಲಿ ರಚಿತಾ ರಾಮ್ ಸಿಗರೇಟ್ ಸೇದಿ ನಾಯಕ ರಾಣಗೆ ಕಿಸ್ ಮಾಡುವ ದೃಶ್ಯವನ್ನು ನೋಡಿ ಬೇಸರಗೊಂಡಿರುವ ಹುಚ್ಚ ವೆಂಕಟ್ ಆ ದೃಶ್ಯವನ್ನು ತೆಗೆದುಹಾಕುವಂತೆ ನಿರ್ದೇಶಕ ಪ್ರೇಮ್ ಅವರಲ್ಲಿ ಮನವಿ ಮಾಡಿದ್ದಾರೆ.
ಇಂತಹ ಅಶ್ಲೀಲ ದೃಶ್ಯಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತದೆ. ಇಂತಹ ದೃಶ್ಯಗಳಿಂದ ಮಕ್ಕಳು ಮತ್ತು ಕುಟುಂಬದವರು ಮುಜುಗರಕ್ಕೆ ಒಳಗಾಗುತ್ತಾರೆ ಎಂದುವೆಂಕಟ್ ವಿಡಿಯೊ ಮೂಲಕ ಹೇಳಿದ್ದಾರೆ.
ಇಂತಹ ದೃಶ್ಯಗಳಿಂದ ಹೆಣ್ಣುಮಕ್ಕಳು ಸಿನಿಮಾ ಮಂದಿರದಲ್ಲಿ ಚಿತ್ರ ನೋಡಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ. ಇಂತಹ ದೃಶ್ಯಗಳಲ್ಲಿ ನಟಿಸುವಂತೆ ಯಾವುದೇ ನಿರ್ದೇಶಕರು ಬಲವಂತ ಮಾಡುವುದಿಲ್ಲ, ನೀವು ಯಾಕೆ ಈ ರೀತಿ ಮಾಡಿದ್ರಿ? ನಿಮಗೆ ಪ್ರತಿಭೆ ತೋರಿಸಲು ಬೇರೆ ಮಾರ್ಗಗಳಿವೆ ಎಂದು ವೆಂಕಟ್ ಹೇಳಿದ್ದಾರೆ.
ವೆಂಕಟ್ ಅವರ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಏಕ್ ಲವ್ ಯಾ’ ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣ ನಾಯಕರಾಗಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.