ಮುಂಬೈ: ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ.
ಕರಣ್ ಮಲ್ಹೋತ್ರ ಆ್ಯಕ್ಷನ್ ಕಟ್ ಹೇಳಿರುವ ‘ಶಂಶೇರಾ’ ಸಿನಿಮಾ ಜುಲೈ 22ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ವಾಣಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಚಿತ್ರತಂಡ, ಪ್ರೇಕ್ಷಕರ ಮನ ಗೆಲ್ಲುವ ಪ್ರಯತ್ನದಲ್ಲಿದೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ರಣಬೀರ್, ‘ನಮ್ಮ (ಕಪೂರ್) ಕುಟುಂಬದವರು ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಶಿಕ್ಷಣದ ಬಗ್ಗೆ ಅಷ್ಟಾಗಿ ಆಸಕ್ತಿವಹಿಸಿರಲಿಲ್ಲ. ನಮ್ಮ ಕುಟುಂಬದಲ್ಲಿ ಮೊದಲು 10ನೇ ತರಗತಿ ಪಾಸ್ ಮಾಡಿದ್ದೇ ನಾನು’ ಎಂದು ಹೇಳಿಕೊಂಡಿದ್ದಾರೆ.
’ವಿದ್ಯಾಭ್ಯಾಸದ ಬಗ್ಗೆ ನಾನು ಕೂಡ ಅಷ್ಟಾಗಿ ಗಮನ ಹರಿಸುತ್ತಿರಲಿಲ್ಲ. ನನ್ನ ಬಗ್ಗೆ ಕುಟುಂಬಸ್ಥರಿಗೆ ಯಾವುದೇ ನಿರೀಕ್ಷೆ ಇರಲಿಲ್ಲ. ನಾನು 10ನೇ ತರಗತಿಯಲ್ಲಿ ಶೇ 53.4ರಷ್ಟು ಅಂಕಗಳನ್ನು ಪಡೆದುಕೊಂಡೆ. ಇದರಿಂದಾಗಿ ಕುಟುಂಬದವರು ಹೆಚ್ಚು ಸಂತಸಪಟ್ಟಿದ್ದರು. ಜತೆಗೆ ಪಾರ್ಟಿಯನ್ನು ಆಯೋಜಿಸಿದ್ದರು’ ಎಂದು ರಣಬೀರ್ ತಿಳಿಸಿದ್ದಾರೆ.
ಬಾಲಿವುಡ್‌ನ ಕ್ಯೂಟ್ ಜೋಡಿ ಎಂದೇ ಹೆಸರಾಗಿರುವ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿ ಇತ್ತೀಚೆಗಷ್ಟೇ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿಕೊಂಡಿದ್ದರು.
ಅಯಾನ್ ಮುಖರ್ಜಿ ಆ್ಯಕ್ಷನ್ ಕಟ್ ಹೇಳಿರುವ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಒಟ್ಟಿಗೆ ಅಭಿನಯಿಸಿದ್ದಾರೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.