ADVERTISEMENT

ಸಿನಿಮಾಗಳು ಸೋತಾಗ ಬಾತ್‌ರೂಮ್‌ನಲ್ಲಿ ಕುಳಿತು ಅಳುತ್ತಿದ್ದೆ: ಶಾರುಕ್‌ ಖಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2024, 14:03 IST
Last Updated 19 ನವೆಂಬರ್ 2024, 14:03 IST
ಶಾರುಕ್‌ ಖಾನ್
ಶಾರುಕ್‌ ಖಾನ್   

ದುಬೈ: ಭಾರತೀಯ ಚಿತ್ರರಂಗದಲ್ಲಿ ಅತಿದೊಡ್ಡ ಜನಪ್ರಿಯತೆ ಗಳಿಸಿರುವ, ಜಗತ್ತಿನ ಅತ್ಯಂತ ಶ್ರೀಮಂತರ ನಟರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಬಾಲಿವುಡ್ ನಟ ಶಾರುಕ್‌ ಖಾನ್‌, ಜೀವನದಲ್ಲಿ ವೈಫಲ್ಯಗಳನ್ನು ಎದುರಿಸಿದ್ದರ ಕುರಿತು ಮಾತನಾಡಿದ್ದಾರೆ.

ದುಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫ್ರೈಟ್‌ ಸಮ್ಮಿಟ್‌ನಲ್ಲಿ(global freight summit) ಭಾಗವಹಿಸಿ ಮಾತನಾಡಿದ ಅವರು, ಸಿನಿಮಾ ಸೋತಾಗ ಅನುಭವಿಸಿದ ಯಾತನೆಯನ್ನು ಹಂಚಿಕೊಂಡಿದ್ದಾರೆ.

‘ಸಿನಿಮಾ ಸೋತಾಗ ತುಂಬಾ ನೋವಾಗುತ್ತಿತ್ತು. ಸೋಲಿನ ಅನುಭವವನ್ನು ನಾನು ತುಂಬಾ ದ್ವೇಷಿಸುತ್ತಿದ್ದೆ. ಬಾತ್‌ರೂಮ್‌ನಲ್ಲಿ ಕುಳಿತು ಅಳುತ್ತಿದ್ದೆ. ಆದರೆ ಆ ನೋವವನ್ನು ಯಾರಿಗೂ ತೋರಿಸಿಕೊಳ್ಳುತ್ತಿರಲಿಲ್ಲ. ನನಗೆ ನಾನೇ ಸಮಾಧಾನಪಟ್ಟುಕೊಂಡು ಆ ಪರಿಸ್ಥಿತಿಯಿಂದ ಮೇಲೆಳುತ್ತಿದ್ದೆ’ ಎಂದು ಸೋಲಿನ ಅನುಭವವನ್ನು ಹೇಳಿದ್ದಾರೆ.

ADVERTISEMENT

‘ಜೀವನದಲ್ಲಿ ಹತಾಶೆಗೊಂಡ ಕ್ಷಣಗಳು ಇವೆ... ಆತ್ಮವಿಶ್ವಾಸದಿಂದ ಮುಂದುವರಿದ ಕ್ಷಣಗಳೂ ಇವೆ.. ಕ್ರಮೇಣ ಈ ಜಗತ್ತು ನಮ್ಮ ವಿರುದ್ಧವಾಗಿಲ್ಲ ಎಂದು ನಮಗೆ ಅರಿವಾಗಲು ಪ್ರಾರಂಭವಾಗುತ್ತದೆ. ಅದಕ್ಕಾಗಿಯೇ ನಾವು ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ಸೋಲು ನಮಗೆ ಮಾತ್ರ ಎಂಬ ಭಾವನೆಯಲ್ಲಿ ಇರಬಾರದು. ಜೀವನ ಸಾಗುತ್ತಲೇ ಇರುತ್ತದೆ’ ಎಂದಿದ್ದಾರೆ.

‘ಜೀವನದಲ್ಲಿ ಏನು ಆಗಬೇಕು ಅದು ಆಗುತ್ತದೆ. ಅದನ್ನು ದೂಷಿಸುತ್ತಾ ಕುಳಿತುಕೊಳ್ಳಬಾರದು. ಏನಾದರೂ ತಪ್ಪು ಆಗಿದ್ದರೆ ಅದು ನನ್ನಿಂದಲೇ ಆಗಿರಬೇಕು ಎಂಬ ಅರಿವು ನಮ್ಮಲ್ಲಿ ಇರಬೇಕು. ಅದನ್ನು ಸರಿಪಡಿಸಿಕೊಂಡು ಮುಂದಕ್ಕೆ ಸಾಗಬೇಕು’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.