ADVERTISEMENT

ನಿಮ್ಮ ದೇಹಕ್ಕೆ ಧನ್ಯವಾದ ಹೇಳಿ: ಇಲಿಯಾನಾ ಡಿಕ್ರೂಜ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2021, 9:33 IST
Last Updated 28 ಸೆಪ್ಟೆಂಬರ್ 2021, 9:33 IST
ನಟಿ ಇಲಿಯಾನಾ ಪೋಸ್ಟ್‌ಗೆ ಅಭಿಮಾನಿಗಳ ಮೆಚ್ಚುಗೆ
ನಟಿ ಇಲಿಯಾನಾ ಪೋಸ್ಟ್‌ಗೆ ಅಭಿಮಾನಿಗಳ ಮೆಚ್ಚುಗೆ   

ಬೆಂಗಳೂರು: ನಟಿ ಇಲಿಯಾನಾ ಡಿಕ್ರೂಜ್ ನಟಿಸಿರುವುದು ಕಡಿಮೆ ಸಂಖ್ಯೆಯ ಚಿತ್ರಗಳಾದರೂ ಅವರ ಅಭಿಮಾನಿಗಳ ಬಳಗ ದೊಡ್ಡದಿದೆ.

ಇಲಿಯಾನಾ ಕೂಡ ಅಭಿಮಾನಿಗಳ ಜತೆ ಸಾಮಾಜಿಕ ತಾಣಗಳ ಮೂಲಕ ಸಂಪರ್ಕದಲ್ಲಿದ್ದು, ವಿವಿಧ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ.

ಈ ಬಾರಿ ಇಲಿಯಾನಾ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ನಾವೆಲ್ಲರೂ ನಮ್ಮ ದೇಹದ ಬಗ್ಗೆ ಅಭಿಮಾನ ಹೊಂದಿರಬೇಕು, ಗೌರವ ಇರಬೇಕು. ನಮ್ಮ ದೇಹವನ್ನು ಪ್ರೀತಿಸಬೇಕು ಮತ್ತು ಸರಿಯಾದ ರೀತಿಯಲ್ಲಿ ಆರೈಕೆ ಮಾಡಬೇಕು ಎಂದು ಹೇಳಿದ್ದಾರೆ.

ADVERTISEMENT

ನಮ್ಮ ಜೀವನದ ವಿವಿಧ ಸಂದರ್ಭದಲ್ಲಿ, ಹಲವು ಬದಲಾವಣೆಗಳಿಗೆ ನಾವು ತೆರೆದುಕೊಳ್ಳುತ್ತೇವೆ, ವೃತ್ತಿ ಜೀವನದ ಮಧ್ಯೆ ಖಾಸಗಿ ಬದುಕಿಗೆ ನಾವು ಸಮಯ ನೀಡಬೇಕು, ದೇಹಕ್ಕೆ ವಿಶ್ರಾಂತಿ ನೀಡುವುದು ಕೂಡ ಅಷ್ಟೇ ಅಗತ್ಯವಾಗಿದೆ ಎಂದು ಇಲಿಯಾನಾ ಹೇಳಿದ್ದಾರೆ.

ಇಲಿಯಾನಾ ಪೋಸ್ಟ್‌ಗೆ ಅಭಿಮಾನಿಗಳು ಮತ್ತು ಬಾಲಿವುಡ್ ಮಂದಿ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.