ಬಹುಭಾಷಾ ನಟ ಸುಮನ್ ಅಭಿನಯದಬಂಜಾರ ಭಾಷೆಯ ಚಿತ್ರ ‘ಸೇವಾ ದಾಸ್’ ಏ.1ರಂದು ತೆರೆಗೆ ಬರಲಿದೆ.
‘ಬಂಜಾರ ಭಾಷೆ ಮಾತನಾಡುವ ಜನ ಕರ್ನಾಟಕ ಸೇರಿದಂತೆ, ದೇಶದ ವಿವಿಧೆಡೆ ವಾಸವಾಗಿದ್ದಾರೆ. ಈಗ ವಿದೇಶದಲ್ಲೂ ನೆಲೆಸಿದ್ದಾರೆ. ನಮ್ಮ ಜನಾಂಗದ ಶಕ್ತಿಯಾಗಿರುವ ಸಂತ ಸೇವಾಲಾಲ್ ಅವರ ಕೃಪೆಯಿಂದ ಇದೇ ಮೊದಲ ಬಾರಿಗೆ ಈ ಚಿತ್ರವನ್ನು ಭಾರತದ ವಿವಿಧ ಕಡೆ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು ನಿರ್ಮಾಪಕ ಸೀತಾರಾಂ ಬಡಾವತ್.
‘ನಾನು ಚಿತ್ರರಂಗಕ್ಕೆ ಬಂದು ನಲವತ್ತು ವರ್ಷ ಕಳೆದಿದೆ. ನನ್ನ ತಂದೆ-ತಾಯಿ ಮಂಗಳೂರಿನವರು. ನಾನು ಹುಟ್ಟಿದ್ದು ಚೆನ್ನೈನಲ್ಲಿ.
ಈ ತನಕ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಇದೇ ಮೊದಲ ಬಾರಿಗೆ ಬಂಜಾರ ಚಿತ್ರದಲ್ಲಿ ನಟಿಸಿದ್ದೇನೆ. ಸಂತ ಸೇವಾಲಾಲ್ ಅವರ ಕೃಪೆಯಿಂದ ಉತ್ತಮ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೇ ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮ ಹಾರೈಕೆಯಿರಲಿ’ ಎಂದರು ನಟ ಸುಮನ್.
ವಿನೋದ್ ರೈನಾ ಸಹ ನಿರ್ಮಾಪಕರು. ಕೆ.ಪಿ.ಎನ್ ಚೌಹಾನ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.