ADVERTISEMENT

ಗಣ್ಯರ ಕಂಬನಿ | ಇರ್ಫಾನ್ ದನಿಯಾಗಿದ್ದರು,ಪ್ರತಿಧ್ವನಿ ಆಗಿರಲಿಲ್ಲ: ಜಾವೇದ್ ಅಖ್ತರ್

ಇರ್ಫಾನ್ ಖಾನ್ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2020, 1:11 IST
Last Updated 30 ಏಪ್ರಿಲ್ 2020, 1:11 IST
ಇರ್ಫಾನ್ ಖಾನ್
ಇರ್ಫಾನ್ ಖಾನ್   

ಖ್ಯಾತ ನಟ ಇರ್ಫಾನ್ ಖಾನ್ ನಿಧನಕ್ಕೆ ಬಾಲಿವುಡ್‌ನ ಸ್ಟಾರ್‌ಗಳು, ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಟ್ವಿಟರ್‌ನಲ್ಲಿ #IrrfanKhan ಇಂಡಿಯಾ ವಿಭಾಗದ ಟಾಪ್‌ ಟ್ರೆಂಡಿಂಗ್‌ ಆಗಿದೆ. ಫೇಸ್‌ಬುಕ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಮಂದಿ ಅಭಿಮಾನದಿಂದ ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ.

ಇರ್ಫಾನ್ ಖಾನ್ ನಿಧನರಾದರು ಎಂದು ತಿಳಿದು ದುಃಖವಾಗಿದೆ. ಅವರ ಸಾವು ಅಕಾಲಿಕವಾದುದು, ಅವರು ದೀರ್ಘ ಹೋರಾಟದ ನಂತರ ಒಂದು ದೊಡ್ಡ ಸ್ಥಾನಮಾನವನ್ನು ಸಾಧಿಸಿದ್ದಾರೆ ಎಂಬುದು ನಿಜ. ನಟನಾಗಿ ಅವರು ದನಿಯಾಗಿದ್ದರು.ಯಾರೊಬ್ಬರ ಪ್ರತಿಧ್ವನಿ ಆಗಿರಲಿಲ್ಲ.ಅವನಲ್ಲಿ ಇನ್ನೂ ಬೇಕಾದಷ್ಟು ಉಳಿದಿತ್ತು, ನಾವೆಲ್ಲರೂ ಅವನನ್ನು ಮಿಸ್ ಮಾಡಿಕೊಳ್ಳುತ್ತೇವೆ.

ಇರ್ಫಾನ್ ಖಾನ್ ನಿಧನರಾದ ಸುದ್ದಿ ಕೇಳಿ ದುಃಖವಾಗಿದೆ. ಅವರು ನನಗಿಷ್ಟವಾದವರಲ್ಲಿ ಒಬ್ಬರಾಗಿದ್ದರು ಮತ್ತು ನಾನು ಅವರ ಎಲ್ಲಾ ಚಲನಚಿತ್ರಗಳನ್ನು ನೋಡಿದ್ದೇನೆ.ಕೊನೆಯದು ಅಂಗ್ರೇಜಿ ಮೀಡಿಯಂ . ನಟನೆ ಅವನಿಗೆ ಅಷ್ಟು ಸಲೀಸಾಗಿ ಬಂದಿತ್ತು, ಅವರು ಅತ್ಯದ್ಬುತವಾಗಿದ್ದರು. ಅವರ ಆತ್ಮಕೆ ಶಾಂತಿ ಸಿಗಲಿ. ಸಂತಾಪಗಳು
-ಸಚಿನ್ ತೆಂಡೂಲ್ಕರ್

ADVERTISEMENT

ಇರ್ಫಾನ್ ಖಾನ್ ಅವರ ಅಗಲಿಕೆಸಿನಿಮಾ ಮತ್ತು ರಂಗಭೂಮಿ ಜಗತ್ತಿಗೆ ತುಂಬಲಾರದ ನಷ್ಟ. ವಿವಿಧ ಮಾಧ್ಯಮಗಳಲ್ಲಿ ಅವರು ನೀಡಿದ ಶ್ರೇಷ್ಠ ನಟನೆ ಸದಾ ನೆನಪಿನಲ್ಲಿರುತ್ತದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.

ಬಹುಮಖ ಮತ್ತು ಪ್ರತಿಭಾನ್ವಿತ ನಟ ಇರ್ಫಾನ್ ಖಾನ್ ನಿಧನ ಸುದ್ದಿ ಕೇಳಿ ಬೇಸರವಾಗಿದೆ.ಜಾಗತಿಕ ಸಿನಿಮಾ ಮತ್ತು ಟಿವಿಯಲ್ಲಿ ಅವರು ಜನಪ್ರಿಯರಾದ ಭಾರತೀಯ ರಾಯಭಾರಿ ಆಗಿದ್ದರು. ಅವರನ್ನು ನೆನಪಲ್ಲಿ ಉಳಿಯತ್ತಾರೆ. ನನ್ನ ಸಂತಾಪಗಳು
- ರಾಹುಲ್ ಗಾಂಧಿ

ಇರ್ಫಾನ್ ಖಾನ್ ಅವರ ನಿಧನ ವಿಷಯ ತಿಳಿದು ಗಾಬರಿಯಾಗಿದ್ದೇನೆ. ನಮ್ಮ ಕಾಲದ ಅನನ್ಯ ನಟ ಅವರು.ಅವರ ಕೆಲಸ ಸದಾ ನೆನಪಿನಲ್ಲಿ ಉಳಿಯಲಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ
-ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

ನನಗೆ ನಿಮ್ಮ ಬಗ್ಗೆ ತುಂಬಾ ಗೊತ್ತಿಲ್ಲ ಆದರೆ ನನಗಿವತ್ತು ಅಳು ತಡೆಯಲಾಗುವುದಿಲ್ಲ, ನಿಮ್ಮ ನಟನೆ ನನ್ನ ಮೇಲೆ ವೈಯಕ್ತಿಕವಾಗಿ ಪ್ರಭಾವ ಬೀರಿತ್ತು, ನಿಮ್ಮ ಆ ಮ್ಯಾಜಿಕ್ ಸದಾ ಉಳಿಯಲಿ. ಟೇಕ್ ಕೇರ್ ಇರ್ಫಾನ್ ಖಾನ್, ನಿಮ್ಮ ಕುಟುಂಬದವರಿಗಾಗಿ ಪ್ರಾರ್ಥಿಸುತ್ತೇನೆ
- ವಿದ್ಯಾಬಾಲನ್ , ನಟಿ

‘ಇರ್ಫಾನ್ ಖಾನ್ ನಿಧನದ ಸುದ್ದಿ ತಿಳಿದು ಬೇಸರವಾಯಿತು. ಅವರೊಬ್ಬ ಅದ್ಭುತ ನಟ. ತಮ್ಮ ಕಲೆಯಿಂದಾಗಿ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದರು. ನಮ್ಮ ಚಿತ್ರಜಗತ್ತಿಗೆ ಆಸ್ತಿಯಾಗಿದ್ದರು. ಅವರ ನಿಧನದಿಂದ ದೇಶವು ಒಬ್ಬ ಅತ್ಯುತ್ತಮ ನಟ ಮತ್ತು ಒಂದು ದಯಾಮಯ ಹೃದಯವನ್ನು ಕಳೆದುಕೊಂಡಂತೆ ಆಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟ್ವೀಟ್ ಮಾಡಿದ್ದಾರೆ.

‘ಭಾರತೀಯ ಸಿನಿಮಾ ಇತಿಹಾಸದಲ್ಲಿಈ ಅದ್ಭುತ ಕಲಾವಿದನ ಹೆಸರು ಚಿರಸ್ಥಾಯಿಯಾಗಿ ನಿಲ್ಲುತ್ತದೆ. ಇರ್ಫಾನ್ ನಿಧನದಿಂದ ನನಗೆ ತುಂಬಾ ದುಃಖವಾಗಿದೆ’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

‘ಅದ್ಭುತ ಕಾರ್ಯಗಳಿಂದ ನೀವು ಸದಾ ನಮ್ಮ ಹೃದಯಗಳಲ್ಲಿ ಇರುತ್ತೀರಿ. ಪ್ರಿಯ ಗೆಳೆಯ,ನಿಮ್ಮ ಸ್ಥಾನವನ್ನು ಯಾರೂ ತುಂಬಲಾರರು. ಅಧ್ಯಾತ್ಮ, ಪುಸ್ತಕ, ಸಿನಿಮಾ... ಎಲ್ಲವೂ ಒಂದು ಖಜಾನೆಯಾಗಿ ನನ್ನೊಂದಿಗೆ ಉಳಿದಿರುತ್ತದೆ’ ಎಂದು ಹಿರಿಯ ನಟಿ ಮತ್ತು ಈಚೆಗಷ್ಟೇ ಕ್ಯಾನ್ಸರ್‌ನಿಂದ ಗುಣಮುಖರಾದ ಹಿರಿಯ ನಟಿ ಮನಿಷಾ ಕೊಯಿರಾಲ ಟ್ವೀಟ್ ಮಾಡಿದ್ದಾರೆ.

‘ಇರ್ಫಾನ್‌ ಖಾನ್ ಸಿನಿಮಾಗಳನ್ನು ಮತ್ತೊಮ್ಮೆ ನೋಡಿ ಅವರ ಬದುಕು ಮತ್ತು ಕಲೆಗೆ ಗೌರವ ಸಲ್ಲಿಸುವೆ. ಅತ್ಯುತ್ತಮ ನಟನನ್ನು ಕಳೆದುಕೊಂಡೆವು.‘ಸುಪಾರಿ’ಯಲ್ಲಿ ನಾವಿಬ್ಬರೂ ಕೆಲಸ ಮಾಡಿದ್ದೆವು. ಒಟ್ಟಿಗೆ ಕಳೆದ ಸಮಯವನ್ನು ಇಂದಿಗೂ ನೆನಪಿಸಿಕೊಳ್ಳುವೆ’ ಎಂದು ನಟಿ ನಂದಿತಾ ದಾಸ್ ಟ್ವೀಟ್ ಮಾಡಿದ್ದಾರೆ.

‘ಅತ್ಯುತ್ತಮ ಗುಣ ಹೊಂದಿದ್ದ ಇರ್ಫಾನ್ ಖಾನ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಅವರಿಗೆ ವಿನಮ್ರ ಶ್ರದ್ಧಾಂಜಲಿ ಅರ್ಪಿಸುತ್ತೇನೆ’ ಎಂದು ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಟ್ವೀಟ್ ಮಾಡಿದ್ದಾರೆ.

‘ಇರ್ಫಾನ್ ಖಾನ್ ನಿಧನದ ಸುದ್ದಿ ಈಗಷ್ಟೇ ತಿಳಿಯಿತು. ಮನಸ್ಸು ಕಲಕಿತು, ದುಃಖದಲ್ಲಿ ಮುಳುಗಿತು. ಎಣೆಯಿಲ್ಲದ ಪ್ರತಿಭೆ, ಅತ್ಯುತ್ತಮ ಸಹೋದ್ಯೋಗಿ, ಸಿನಿಮಾ ಜಗತ್ತಿಗೆ ಅಪರೂಪದ ಕೊಡುಗೆ ಕೊಟ್ಟವರು ಅವರು. ನಮ್ಮನ್ನು ಇಷ್ಟು ಬೇಗ ಬಿಟ್ಟು ಹೋದರು ಎನ್ನುವುದನ್ನು ನಂಬಲು ಆಗುತ್ತಿಲ್ಲ. ಸಿನಿ ಜಗತ್ತಿನಲ್ಲಿ ನಿರ್ವಾತ ಸೃಷ್ಟಿಯಾಗಿದೆ. ನನ್ನ ಸಂತಾಪಗಳು ಎಂದು ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದಾರೆ’.

‘ನಮ್ಮ ಮನಸ್ಸು ಖಿನ್ನಗೊಳಿಸುವಂಥದ್ದೇನೂ ಆಗುವುದಿಲ್ಲ ಎನಿಸಿದಾಗ ಹೀಗಾಯಿತು. ನಿಮ್ಮೆಲ್ಲಾ ಚಿತ್ರಗಳನ್ನು ಮತ್ತೊಮ್ಮೆ ಮಗದೊಮ್ಮೆ ನೋಡುತ್ತಿರುತ್ತೇನೆ. ನೀವಿಲ್ಲ ಎಂಬುದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ನೀವು ನನಗೆ ಹಾಗೇ ಪರಿಚಿತರು. ಅದೇ ರೀತಿ ನಿಮ್ಮನ್ನು ಸದಾ ಉಳಿಸಿಕೊಳ್ಳುತ್ತೇನೆ. ನೀವು ನಮ್ಮ ಜೊತೆಗಿದ್ದ ಒಂದೊಳ್ಳೆ ಜೀವ’ ಎಂದು ನಟಿ ತಾಪ್ಸಿ ಪನ್ನು ಟ್ವೀಟ್ ಮಾಡಿದ್ದಾರೆ.

ಇರ್ಫಾನ್‌ ಖಾನ್. ನಿಮ್ಮಂತೆ ಇನ್ನೊಬ್ಬರು ಎಂದಿಗೂ ಇರಲು ಸಾಧ್ಯವಿಲ್ಲ ಎಂದು ಖ್ಯಾತನಟ ಪರೇಶ್ ರಾವಲ್ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.