ADVERTISEMENT

ಕೊರೊನಾ ವೈರಸ್‌ ತಗುಲಿಲ್ಲ, ನಾನು ಆರೋಗ್ಯವಾಗಿದ್ದೇನೆ– ನಟ ಜಾಕಿ ಚಾನ್‌ 

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 10:31 IST
Last Updated 1 ಮಾರ್ಚ್ 2020, 10:31 IST
   

ಹಾಂಗ್‌ಕಾಂಗ್‌: ನಾನು ಆರೋಗ್ಯವಾಗಿದ್ದು, ಕೊರಾನಾ ವೈರಸ್‌ನಿಂದಬಳಲುತ್ತಿಲ್ಲ ಎಂದುಹಾಲಿವುಡ್ ಆ್ಯಕ್ಷನ್ ಕಿಂಗ್ಜಾಕಿ ಚಾನ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಎರಡು ದಿನಗಳಿಂದಜಾಕಿ ಚಾನ್ಕೊರಾನಾ ವೈರಸ್ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದವು. ಇದೀಗ ಜಾಕಿಜಾನ್ ಅವರೇ ಸ್ಪಷ್ಟನೆ ನೀಡಿ, ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಎಲ್ಲಾರಿಗೂ ಧನ್ಯವಾದಗಳು. ಸದ್ಯ ನಾನು ಆರೋಗ್ಯವಾಗಿದ್ದೇನೆ. ಅಭಿಮಾನಿಗಳುಗಾಬರಿಪಡುವ ಅಗತ್ಯವಿಲ್ಲ. ಎಲ್ಲರೂ ಆರೋಗ್ಯವಾಗಿರುವುದಾಗಿ ಭಾವಿಸುತ್ತೇನೆ ಎಂದು ಜಾಕಿ ಚಾನ್ ಬರೆದುಕೊಂಡಿದ್ದಾರೆ.

ADVERTISEMENT

65 ವರ್ಷದ ಜಾಕಿ ಚಾನ್ ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಿರುವುದು ನಿಜ, ಆದರೆ ಅವರು ಕೊರೊನಾ ವೈರಸ್‌ನಿಂದ ಬಳುತ್ತಿದ್ದಾರೆ ಎಂಬುದು ಮಾತ್ರ ಗೊತ್ತಾಗಿಲ್ಲ ಎಂದು ಹಾಂಕಾಂಗ್‌ನ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. ಚೀನಾದಲ್ಲಿ ಇಲ್ಲಿಯವರೆಗೂ 2,924 ಮಂದಿ ಕೊರೊನಾ ವೈರೆಸ್ ದಾಳಿಗೆ ತುತ್ತಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.