‘ಕ್ಯಾ ಭೀಡು.. ಥೋಡಾ ರುಕ್‌ನಾ... ಓಯ್ ಭೀಡು... ಥೋಡಾ ಚಲ್‌ನಾ... ಉಧರ್‌ಸೆ... ನಿಕಲ್ ಯಾರ್..’ ಹೀಗೆ ಬಾಲಿವುಡ್‌ನ ಭೀಡು ಜಾಕಿಶ್ರಾಫ್ ನಿರ್ದೇಶನಗಳನ್ನು ನೀಡಿದ್ದು ಲಖನೌನಲ್ಲಿ.
80ರ ದಶಕದಲ್ಲಿ ಸುಭಾಷ್ ಘಾಯ್ ಅವರ ‘ಹೀರೊ’ ಚಿತ್ರದಿಂದ ಗಮನ ಸೆಳೆದ ಜಾಕಿಶ್ರಾಫ್ ಸೋಮವಾರ ಲಖನೌ ರಸ್ತೆಗಳಲ್ಲಿ ಟ್ರಾಫಿಕ್ ಜಾಂ ಆಗಿರುವುದನ್ನು ನೋಡಿ, ರಸ್ತೆಗಿಳಿದು ಸಂಚಾರವನ್ನು ಸುಗಮಗೊಳಿಸುವಲ್ಲಿ ನೆರವಾದರು.
ನಾಯಕನೆಂದು ಗಾಜೇರಿಸಿಕೊಂಡ ಕಾರಿನಲ್ಲಿ ಕುಳಿತು, ಟ್ರಾಫಿಕ್ ಬಗ್ಗೆ ಶಪಿಸದೇ, ಚಡಪಡಿಸದೇ, ರಸ್ತೆಗಿಳಿದ ಜಾಕಿ, ಒಂದೊಂದೇ ಕಾರುಗಳನ್ನು ಮುನ್ನಡೆಯುವಂತೆ ಸೂಚಿಸಿದರು. ಒಂದೆಡೆ ಸಂಚಾರ ಸ್ಥಗಿತಗೊಳಿಸಿ, ಇನ್ನೊಂದೆಡೆ ಮುನ್ನಡೆಸಿ, ರಸ್ತೆ ಖಾಲಿಯಾಗುವಂತೆ ಮಾಡಿದರು.
ಜಾಕಿ ಸಂಚಾರ ನಿಯಂತ್ರಿಸುತ್ತಿರುವ ವಿಡಿಯೊ ಇದೀಗ ವೈರಲ್ ಆಗಿದೆ. ತಮ್ಮದೇ ಚಿತ್ರದೊಂದಿಗೆ ಟ್ವಿಟರ್ ಖಾತೆಯಲ್ಲಿ ಜಾಕಿ ಮಿಂಚುತ್ತಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿ ಎಂಬ ಒಕ್ಕಣೆಯೊಂದಿಗೆ.
ಕಿರುಚಿತ್ರಗಳ ನಟನೆಯಲ್ಲಿ ನಿರತರಾಗಿರುವ ಜಾಕಿಶ್ರಾಫ್ ಇದೀಗ ಸಂಜಯ್ ದತ್ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು 2010ರಲ್ಲಿ ಬಿಡುಗಡೆಯಾಗಿದ್ದ ತೆಲುಗು ಚಿತ್ರ ‘ಪ್ರಸ್ಥಾನಂ’ನ ರಿಮೇಕ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.