ಇಂಡಸ್ ಹರ್ಬ್ಸ್‌ನ ಟಿ .ಸಿ. ರವೀಂದ್ರ ತುಂಬರಮನೆ ನಿರ್ಮಿಸಿ , ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ಜಲಪಾತ ಚಿತ್ರದ 2 ನೇ ಹಾಡು (ಲವ್ ಸಾಂಗ್) ಇದೀಗ ಎ - 2 ಮ್ಯೂಸಿಕ್ ವಾಹಿನಿಯ ಮುಖಾಂತರ ಬಿಡುಗಡೆಯಾಗಿದೆ.
ಇತ್ತೀಚೆಗೆ ಸಿನಿಮಾ ನಿರ್ಮಾಣ ತಂಡ ಆಯೋಜಿಸಿದ್ದ ‘ಜಲಪಾತ ಮಲೆನಾಡು ಉತ್ಸವ’ ಎಂಬ ಸಾಂಸ್ಕೃತಿಕ ಮೇಳದಲ್ಲಿ ಖ್ಯಾತ ನಟಿ ಜಯಮಾಲ ಅವರು ‘ಎಲ್ಲಿ ಹೋದನೇ ಸಖಿ’ ಎಂಬ ಹಾಡನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತಾಡಿದ ಜಯಮಾಲ ತನ್ನ ಮಲೆನಾಡು ಮೂಲ ಚಿಕ್ಕಮಗಳೂರನ್ನು ನೆನಪಿಸಿಕೊಂಡರು. ಚಿತ್ರದ ನಾಯಕ ನಟಿ ನಾಗಶ್ರೀಗೆ ಯಶಸ್ಸುಸಿಗಲಿ ಎಂದು ಹಾರೈಸಿದರು.
ಇಡೀ ಸಿನಿಮಾದ ಆಶಯವೇ ವಿನಾಶದಂಚಿಗೆ ಸರಿದಿರುವ ಪರಿಸರದ ಕುರಿತು ಕಾಳಜಿ ಮೂಡಿಸುವಂಥದ್ದು. ವ್ಯಾವಹಾರಿಕ ಉದ್ದೇಶಗಳಿಲ್ಲದೇ ನಿಜವಾದ ಪ್ರಕೃತಿ ಪ್ರೀತಿಯಿಂದ ನಿರ್ಮಿಸಿದ ಈ ಚಿತ್ರ ಖಂಡಿತಾ ಜನರಮನಸ್ಸು ಗೆಲ್ಲಲಿದೆ ಎಂದರು ಜಯಮಾಲ.
ನಿರ್ಮಾಪಕ ಟಿ ಸಿ ರವೀಂದ್ರ ತುಂಬರಮನೆ ಮಾತನಾಡಿ ‘ನಾವು ಸಿನಿಮಾದಲ್ಲಿ ಹೆಚ್ಚು ಗ್ರಾಮೀಣ ಪ್ರತಿಭೆಗಳನ್ನೇ ಬಳಸಿಕೊಂಡು ಅವರಿಗೊಂದು ವೇದಿಕೆ ಒದಗಿಸಿದ್ದೇವೆ. ಬಹಳ ಅರ್ಥಪೂರ್ಣವಾದ ಈ ಪ್ರೇಮ ಗೀತೆಯನ್ನು ವನಿತಾ ವೆಂಕಟೇಶ್ ಬರೆದಿದ್ದಾರೆ ಎಂದರು
ನಿರ್ದೇಶಕ ರಮೇಶ್ ಬೇಗಾರ್ ಮತ್ತು ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ ಈ ಸಂದರ್ಭ ಮಾತನಾಡಿದರು
‘ಎಲ್ಲಿಹೋದನೇ ಸಖಿ’ ಹಾಡನ್ನು ವನಿತಾ ವೆಂಕಟೇಶ್ ಬರೆದಿದ್ದು ಸಾದ್ವಿನಿ ಕೊಪ್ಪ ಸಂಗೀತ ಸಂಯೋಜನೆ ಮಾಡಿ ಶ್ರೀನಿಧಿ ಶಾಸ್ತ್ರೀ ಅವರೊಂದಿಗೆ ಡ್ಯುಯೆಟ್ ಹಾಡಿದ್ದಾರೆ. ಸೆಪ್ಟೆಂಬರ್ 29 ಕ್ಕೆ ’ಜಲಪಾತ’ ತೆರೆಕಾಣಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.