ಕೊರೊನಾ ಅವಾತಂರವಿಲ್ಲದಿದ್ದರೆಈ ವರ್ಷ ಖ್ಯಾತ ಬಾಂಡ್ ಸರಣಿಯ 25ನೇ ಸಿನಿಮಾ 'ನೋ ಟೈಂ ಟು ಡೈ' ಏಪ್ರಿಲ್‌ಗೆ ರಿಲೀಸ್ ಆಗಬೇಕಿತ್ತು. ಸಿನಿಮಾ ಮುಂದಕ್ಕೆ ಹೋದ ತಲೆನೋವಿನಲ್ಲಿದ್ದ ಬಾಂಡ್ ಸರಣಿಗೀಗ ಮತ್ತೊಂದು ಆಘಾತವೊಂಟಾಗಿದೆ. ಬಾಂಡ್ ಸಿನಿಮಾದಲ್ಲಿ ಬಳಸಿದ್ದ ದುಬಾರಿ ಐದು ಬಂದೂಕುಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಹಾಲಿವುಡ್‌ನ ಖ್ಯಾತ ಬಾಂಡ್‌ಸಿನಿಮಾ ಸರಣಿಗಳಲ್ಲಿ ಒಂದಾಗಿರುವ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಬಳಸಿದ್ದ ಅಪರೂಪದ ದುಬಾರಿ ಬಂದೂಕುಗಳು ಇವು.
ಕಳ್ಳರು ಪೂರ್ವ ಯೂರೋಪಿಯನ್ ಇರಬೇಕು, ಸಿಲ್ವರ್ ಬಣ್ಣದ ಕಾರಿನಲ್ಲಿ ಬಂದಿದ್ದರು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಕಳ್ಳರು ಬಂದಿರಬಹುದು ಎಂದು ನೆರೆಮನೆಯವರುಗಲಾಟೆ ಜೋರು ಮಾಡುತ್ತಿದ್ದಂತೆಕಳ್ಳರು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಈ 5 ಬಂದೂಕುಗಳು ನಿಷ್ಕ್ರಿಯಗೊಳಿಲಾಗಿದ್ದು, ಅವುಗಳಿಂದ ಗುಂಡು ಹಾರಿಸಲು ಸಾಧ್ಯವಿಲ್ಲ. ಆದರೆ ಅನೇಕ ವರ್ಷಗಳಿಂದ ಸಿನಿಮಾದಲ್ಲಿ ಬಳಸಿದ ಅಪರೂಪದ, ವಿಶಿಷ್ಟ ಬಂದೂಕುಗಳಾಗಿವೆ. ಹಾಗಾಗಿ ಈ ಗನ್‌ಗಳನ್ನು ಖಂಡಿತವಾಗಿಯೂ ಸಾರ್ವಜನಿಕರು ಗುರುತಿಸುತ್ತಾರೆ. ಅಲ್ಲದೆ ಕದ್ದವರು ಒಂದು ವೇಳೆ ಮಾರಾಟ ಮಾಡಲು ಯತ್ನಿಸಿದರೂಗೊತ್ತಾಗುತ್ತೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ವೈರಸ್ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದ್ದು ನವೆಂಬರ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.