ADVERTISEMENT

ಖುಷಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಜಾಹ್ನವಿ ಕಪೂರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 7:49 IST
Last Updated 2 ಮೇ 2022, 7:49 IST
ಖುಷಿ ಕಪೂರ್ ಮತ್ತು ಜಾಹ್ನವಿ ಕಪೂರ್
ಖುಷಿ ಕಪೂರ್ ಮತ್ತು ಜಾಹ್ನವಿ ಕಪೂರ್    

ಬೆಂಗಳೂರು: ಬಾಲಿವುಡ್‌ನ ಪ್ರತಿಷ್ಠಿತ ಕಪೂರ್ ಕುಟುಂಬದ ಕುಡಿಗಳಾದ ಖುಷಿ ಕಪೂರ್ ಮತ್ತು ಜಾಹ್ನವಿ ಕಪೂರ್ ಸದಾ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತೆ ಇರುತ್ತಾರೆ. ಹೊರಗಡೆ ಸುತ್ತಾಡಲುಹೋಗುವುದು, ಹೋಟೆಲ್, ರೆಸ್ಟೋರೆಂಟ್‌ಗೆ ತೆರಳುವುದು ಕೂಡ ಜತೆಯಾಗಿಯೇ ಎಂಬುದಕ್ಕೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಿಂದೆ ಹಂಚಿಕೊಂಡಿರುವ ಫೋಟೊಗಳೇ ಸಾಕ್ಷಿ.

ಆದರೆ ಜಾಹ್ನವಿ ಇತ್ತೀಚೆಗೆ ಸಿನಿಮಾ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಹೋದರಿ ಖುಷಿ ಜತೆ ಹೆಚ್ಚಿನ ಸಮಯ ಕಳೆಯಲಾಗುತ್ತಿಲ್ಲವಂತೆ.

ಆದ್ದರಿಂದ, ಖುಷಿಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವಳನ್ನು ಅಪ್ಪಿ, ಮುದ್ದಾಡಬೇಕೆನಿಸುತ್ತದೆ ಎಂದು ಜಾಹ್ನವಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT
ಇನ್‌ಸ್ಟಾಗ್ರಾಮ್ ಸ್ಟೋರೀಸ್‌ ಪೋಸ್ಟ್

ಜತೆಗೆ, ಖುಷಿ ಜತೆಗಿನ ಬಾಲ್ಯದ ಫೋಟೊ ಒಂದನ್ನು ಕೂಡ ಜಾಹ್ನವಿ ಸ್ಟೋರೀಸ್‌ನಲ್ಲಿ ಪೋಸ್ಟ್ ಮಾಡಿದ್ದು, ಐ ಮಿಸ್‌ ಯೂ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.