ಬೆಂಗಳೂರು: ನಟ ಧ್ರುವ ಸರ್ಜಾ ನಾಯಕರಾಗಿದ್ದ ‘ಪೊಗರು‘ ಸಿನಿಮಾದಲ್ಲಿ ನಟಿಸಿದ್ದ, ಬಾಡಿ ಬಿಲ್ಡಿಂಗ್ನಲ್ಲಿ ವಿಶ್ವ ವಿಖ್ಯಾತಿ ಪಡೆದಿದ್ದ ಜೋ ಲಿಂಡ್ನರ್ ನಿಧನರಾಗಿದ್ದಾರೆ.
ಫಿಟ್‌ನೆಸ್ ಬಗ್ಗೆ ಕಾಳಜಿ ಹೊಂದಿದ್ದ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡರ್ ಆಗಿ ಗುರುತಿಸಿಕೊಂಡಿದ್ದ ಜೋ ಲಿಂಡ್ನರ್ ಕಿರಿಯ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು.
ಜೋ ಲಿಂಡ್ನರ್ ನಿಧನಕ್ಕೆ ಧ್ರುವ ಸರ್ಜಾ ಸಂತಾಪ ಸೂಚಿಸಿದ್ದಾರೆ. 'ಪೊಗರು' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಜೋ ಲಿಂಡ್ನರ್ ಕಾಣಿಸಿಕೊಂಡಿದ್ದರು. ಇದರಲ್ಲಿ ಧ್ರುವ ಸರ್ಜಾ ಹಾಗೂ ಜೋ ಲಿಂಡ್ನರ್ ಫೈಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಲಿಂಡ್ನರ್ ನಿಧನದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿ ಧ್ರುವ ಸರ್ಜಾ ಸಂತಾಪ ಸೂಚಿಸಿದ್ದಾರೆ.
ಲಿಂಡ್ನರ್ ನಿಧನದ ಬಗ್ಗೆ ಗೆಳತಿ ನಿಚಾ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಏಕಾಏಕಿ ರಕ್ತನಾಳಗಳ ಸಮಸ್ಯೆಯಿಂದಾಗಿ ಲಿಂಡ್ನರ್ ನಿಧನರಾದರು ಎಂದು ಹೇಳಿದ್ದಾರೆ.
ಲಿಂಡ್ನರ್ ಅವರು ಜರ್ಮನ್ ಮೂಲದವರು. ಸದ್ಯ ಅವರು ಗೆಳತಿ ನಿಚಾ ಜೊತೆಯಲ್ಲಿ ಥೈಲ್ಯಾಂಡ್‌ನಲ್ಲಿ ವಾಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.