ಜೋಕಿನ್ ಫೋನಿಕ್ಸ್ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ‘ಜೋಕರ್’ ಮತ್ತೆ ಭಾರತದಲ್ಲಿ ಪ್ರೇಮಿಗಳ ದಿನದಂದೇ ಬಿಡುಗಡೆ ಕಾಣಲಿದೆ. ಅವತ್ತು ವ್ಯಾಲಂಟೈನ್ಸ್ ಡೇ ಇರುವುದು ಈ ಮರುಬಿಡುಗಡೆಗೆ ಕಾರಣವಲ್ಲ. ಆ ವೇಳೆಗೆ ಈ ವರ್ಷದ ಆಸ್ಕರ್ (ಅಕಾಡೆಮಿ) ಪ್ರಶಸ್ತಿಗಳು ಘೋಷಣೆಯಾಗಿ ನಾಲ್ಕು ದಿನ ಕಳೆದಿರುತ್ತದೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಉತ್ತಮ ನಟ, ಉತ್ತಮ ಸಿನಿಮಾ, ಉತ್ತಮ ನಿರ್ದೇಶನ ಸಹಿತ 11 ವಿಭಾಗಗಳಲ್ಲಿ ಸ್ಪರ್ಧೆಗೆ ‘ಜೋಕರ್’ ನಾಮಕರಣಗೊಂಡಿದೆ. ಎರಡನೇ ಬಾರಿಯ ಬಿಡುಗಡೆಯ ಸಂದರ್ಭದಲ್ಲಿ ‘ಇಂತಿಷ್ಟು ಆಸ್ಕರ್ ಪ್ರಶಸ್ತಿಗಳನ್ನು ಬಗಲಿಗೇರಿಸಿಕೊಂಡ’ ಎನ್ನುವ ಟ್ಯಾಗ್‌ಲೈನ್ ಚಿತ್ರದ ಜಾಹೀರಾತಿನಲ್ಲಿ ಇರುವುದು ಖಚಿತ!
ಈ ಹಿಂದೆ ಗಾಣಧಿ ಜಯಂತಿಯಂದು (ಅಕ್ಟೋಬರ್ 2) ‘ಜೋಕರ್’ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆ ಕಂಡಿತ್ತು. ವಿಶ್ವದಾದ್ಯಂತ 100 ಕೋಟಿ ಅಮೆರಿಕನ್ ಡಾಲರ್ ಬಾಕ್ಸಾಫೀಸ್ ಕಲೆಕ್ಷನ್‌ನೊಂದಿಗೆ ದಾಖಲೆ ಬರೆದ ಈ ಸಿನಿಮಾ, ಆಸ್ಕರ್‌ನಲ್ಲಿ ಅತ್ಯಧಿಕ ಪ್ರಶಸ್ತಿಗಳನ್ನು ಗೆದ್ದು ದಾಖಲೆ ನಿರ್ಮಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.