ADVERTISEMENT

Kalki X Review: ಮಹಾಕಾವ್ಯದ ದೃಶ್ಯವೈಭವದಲ್ಲಿ ಮಿಂಚು ಹರಿಸಿದ 'ಪ್ರಭಾಸ್'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜೂನ್ 2024, 7:27 IST
Last Updated 27 ಜೂನ್ 2024, 7:27 IST
<div class="paragraphs"><p>Kalki </p></div>

Kalki

   

ಬೆಂಗಳೂರು: ತೆಲುಗು ನಟ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾ ಗುರುವಾರ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಿನಿಮಾ ನೋಡಿದ ಪ್ರಭಾಸ್‌ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ, ಎಕ್ಸ್‌ ಖಾತೆಗಳಲ್ಲಿ ಕಲ್ಕಿ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. 

ADVERTISEMENT

ಕಲ್ಕಿ ‘ಚಿತ್ರಕ್ಕೆ ಐತಿಹಾಸಿಕತೆಯ ಟಚ್‌ ನೀಡಲಾಗಿದ್ದು ಕೊನೆಯಲ್ಲಿ 30 ನಿಮಿಷ ಥ್ರಿಲ್ಲಿಂಗ್ ಆಗಿದೆ’ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.

₹ 600 ಕೋಟಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಸೈನ್ಸ್​ ಫಿಕ್ಷನ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಗ್ರಾಫಿಕ್ಸ್‌ ಕೈಚಳಕ, ಅದ್ದೂರಿತನ, ತರಹೇವಾರಿ ಸೆಟ್‌ಗಳು ತುಂಬಾ ಇಷ್ಟವಾಗಿವೆ ಎಂದು ಕೆಲವರು ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ಅಮಿತಾಬ್‌, ಕಮಲ್ ಹಾಸನ್ ಅಭಿನಯಕ್ಕೆ ಅಭಿಮಾನಗಳು ಬಹುಪರಾಕ್‌ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.