ಮುಂಬೈ: ಬಾಲಿವುಡ್‌ನಲ್ಲಿ ‘ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ'ಯಾಗಿದ್ದರೂ ಸಹ ‘ಕೆಲಸವಿಲ್ಲ’ ಎಂಬ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ ಎಂದು ನಟಿ ಕಂಗನಾ ರಣಾವತ್ಹೇಳಿದ್ದಾರೆ.
ಈ ಬಗ್ಗೆ ಮಂಗಳವಾರ ರಾತ್ರಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ 34 ವರ್ಷದ ನಟಿ, ತಾನು ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಯಲ್ಲಿ ಅರ್ಧದಷ್ಟು ಹಣವನ್ನು ಇನ್ನೂ ಪಾವತಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
‘ನಾನು ಅತ್ಯಧಿಕ ತೆರಿಗೆ ಸ್ಲ್ಯಾಬ್‌ನ ಅಡಿಯಲ್ಲಿ ಬರುವುದರಿಂದ ನನ್ನ ಆದಾಯದ ಸುಮಾರು 45 ಪ್ರತಿಶತವನ್ನು ತೆರಿಗೆಯಾಗಿ ಪಾವತಿಸುತ್ತೇನೆ. ನಾನು ಅತಿ ಹೆಚ್ಚು ತೆರಿಗೆ ಪಾವತಿಸುವ ನಟಿ ಆಗಿದ್ದರೂ ಯಾವುದೇ ಕೆಲಸ ಇಲ್ಲದ ಕಾರಣದಿಂದಾಗಿ ನನ್ನ ಕಳೆದ ವರ್ಷದ ತೆರಿಗೆಯ ಅರ್ಧದಷ್ಟು ಹಣವನ್ನು ಇನ್ನೂ ಪಾವತಿಸಿಲ್ಲ, ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ತೆರಿಗೆ ಪಾವತಿಸಲು ತಡ ಮಾಡಿದ್ದೇನೆ’ಎಂದು ರಣಾವತ್ ಬರೆದಿದ್ದಾರೆ.
ಇತ್ತೀಚೆಗೆ, ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿರುವ ಕಂಗನಾ, ಬಾಕಿ ಉಳಿದಿರುವ ತೆರಿಗೆ ಮೊತ್ತಕ್ಕೆ ಸರ್ಕಾರ ಬಡ್ಡಿ ವಿಧಿಸುತ್ತಿದೆ. ಈ ಕ್ರಮವನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
‘ನಾನು ತೆರಿಗೆ ಪಾವತಿಸಲು ತಡ ಮಾಡಿದ್ದೇನೆ. ಆದರೆ ಬಾಕಿ ಇರುವ ತೆರಿಗೆ ಹಣಕ್ಕೆ ಸರ್ಕಾರ ನನಗೆ ಬಡ್ಡಿ ವಿಧಿಸುತ್ತಿದೆ, ಈಗಲೂ ನಾನು ಈ ಕ್ರಮವನ್ನು ಸ್ವಾಗತಿಸುತ್ತೇನೆ. ಸಮಯವು ನಮಗೆ ವೈಯಕ್ತಿಕವಾಗಿ ಕಠಿಣವಾಗಬಹುದು ಆದರೆ, ಒಟ್ಟಾಗಿ ನಾವು ಸಮಯಕ್ಕಿಂತ ಕಠಿಣವಾಗಿದ್ದೇವೆ’ ಎಂದುತಿಳಿಸಿದ್ದಾರೆ.
ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣದಿಂದಾಗಿ ಮುಂದೂಡಲ್ಪಟ್ಟ ತನ್ನ ಬಹುಭಾಷಾ ಚಿತ್ರ ‘ತಲೈವಿ’ ಬಿಡುಗಡೆಗಾಗಿರಣಾವತ್ ಕಾಯುತ್ತಿದ್ದಾರೆ.
ವಿಜಯ್ ನಿರ್ದೇಶನದ ಮತ್ತು ಕೆ.ವಿ.ವಿಜೇಂದ್ರ ಪ್ರಸಾದ್ ಚಿತ್ರಕಥೆ ಬರೆದಿರುವ ಈ ಚಿತ್ರವು ತಮಿಳುನಾಡಿನ ಮಾಜಿ ಸಿಎಂ ಜೆ.ಜಯಲಲಿತಾ ಅವರ ಜೀವನ ಚರಿತ್ರೆಯಾಗಿದೆ.
‘ತೇಜಸ್’ ಮತ್ತು ಆಕ್ಷನ್ ‘ಧಾಕಡ್’ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟಿ ಕಂಗನಾ ಕೈಯಲ್ಲಿವೆ. ‘ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ’ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಚಿತ್ರವೂ ಸಿದ್ಧಗೊಳ್ಳುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.