Photo Gallery: ಧಾಕಡ್ ಸಿನಿಮಾ ಟ್ರೈಲರ್ ಬಿಡುಗಡೆಯಲ್ಲಿ ಗಮನ ಸೆಳೆದ ಕಂಗನಾ ಬೋಲ್ಡ್ ಲುಕ್
ಬೆಂಗಳೂರು: ಸದಾ ತಮ್ಮ ಬೋಲ್ಡ್ ಲುಕ್ ಹಾಗೂ ಬೋಲ್ಡ್ ಮಾತುಗಳಿಂದಲೇ ಗಮನ ಸೆಳೆಯುವ ಬಾಲಿವುಡ್ ನಟಿ ಕಂಗನಾ ರನೌಟ್ ಅವರು ಇತ್ತೀಚೆಗೆ ತಮ್ಮ ದಾಕಡ್ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಧರಿಸಿದ್ದ ದಿರಿಸು ಹಲವರ ಕಣ್ಣು ಕುಕ್ಕುವಂತೆ ಮಾಡಿದೆ.ಈ ಚಿತ್ರಗಳನ್ನು ಸ್ವತಃ ಕಂಗನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಅನೇಕರು ಈ ಚಿತ್ರಗಳ ಬಗ್ಗೆ ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನೀವು ಮುಂದಿನ ಮಹಾರಾಷ್ಟ್ರದ ಸಿಎಂ ಆಗುವರು. ಈ ರೀತಿ ಡ್ರೆಸ್ ಹಾಕಬೇಡಿ ಎಂದಿದ್ದಾರೆ.ಇನ್ನು ಕೆಲವರು ಈ ರೀತಿಯ ಫೋಟೊಗಳು ಯುವಕರ ಹೃದಯ ಬಡಿತ ಹೆಚ್ಚಿಸುತ್ತವೆ ಎಂದು ಹೇಳಿದ್ದಾರೆ. ಆದರೆ, ಇದ್ಯಾವುದಕ್ಕೆ ತಲೆ ಕೆಡಿಸಿಕೊಳ್ಳದೇ ಕಂಗನಾ ಆಗಾಗ ತಮ್ಮ ಬೋಲ್ಡ್ ಅವತಾರವನ್ನು ತೋರಿಸುತ್ತಲೇ ಇರುತ್ತಾರೆ.ಇನ್ನು ಮೇ 20 ರಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಧಾಕಡ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಜಾವಾಣಿ ವಾರ್ತೆ
Published 1 ಮೇ 2022, 13:08 IST
Last Updated 1 ಮೇ 2022, 13:08 IST
ದಾಕಡ್ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಂಗನಾ ಧರಿಸಿದ್ದ ದಿರಿಸು
ದಾಕಡ್ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಂಗನಾ ಧರಿಸಿದ್ದ ದಿರಿಸು
ದಾಕಡ್ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಂಗನಾ ಧರಿಸಿದ್ದ ದಿರಿಸು
ದಾಕಡ್ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಂಗನಾ ಧರಿಸಿದ್ದ ದಿರಿಸು