ADVERTISEMENT

ನಟ ದುನಿಯಾ ವಿಜಯ್ ತಂದೆ ರುದ್ರಪ್ಪ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2021, 10:38 IST
Last Updated 18 ನವೆಂಬರ್ 2021, 10:38 IST
ತಂದೆ ರುದ್ರಪ್ಪ ತಾಯಿ ನಾರಾಯಣಮ್ಮ ಅವರ ಜೊತೆ ದುನಿಯಾ ವಿಜಯ್, ಚಿತ್ರ–ಫೇಸ್‌ಬುಕ್ Duniya Vijay
ತಂದೆ ರುದ್ರಪ್ಪ ತಾಯಿ ನಾರಾಯಣಮ್ಮ ಅವರ ಜೊತೆ ದುನಿಯಾ ವಿಜಯ್, ಚಿತ್ರ–ಫೇಸ್‌ಬುಕ್ Duniya Vijay   

ಬೆಂಗಳೂರು: ನಟ, ನಿರ್ದೇಶಕ ದುನಿಯಾ ವಿಜಯ್ ತಂದೆ ರುದ್ರಪ್ಪ ಅವರು ಇಂದು (ನ.19) ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ರುದ್ರಪ್ಪ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ತಮ್ಮ ತಂದೆ ನಿಧನರಾಗಿದ್ದರ ಕುರಿತು ಫೇಸ್‌ಬುಕ್‌ಲ್ಲಿ ದುನಿಯಾ ವಿಜಯ್ ಬರೆದುಕೊಂಡಿದ್ದು, ‘ಮಿಸ್ ಯು ಅಪ್ಪಾ’ ಎಂದು ಪೋಸ್ಟ್ ಹಾಕಿದ್ದಾರೆ.

ADVERTISEMENT

ಕಳೆದ ಜುಲೈನಲ್ಲಿ ವಿಜಯ್ ಅವರ ತಾಯಿ ನಾರಾಯಣಮ್ಮ ಕೂಡ ನಿಧನರಾಗಿದ್ದರು. ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.