ಬೆಂಗಳೂರು: ನಟ ರಮೇಶ್ ಅರವಿಂದ್ –ಸುಹಾಸಿನಿ ಅಭಿನಯದ ‘ಅಮೃತವರ್ಷಿಣಿ’ ಸಿನಿಮಾ ಬಿಡುಗಡೆಯಾಗಿ 25 ವರ್ಷ ಕಳೆದಿದ್ದು, ಈ ಹಿನ್ನೆಲೆಯಲ್ಲಿ ರಮೇಶ್ ಅರವಿಂದ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಪ್ರಕಟಿಸಿರುವ ಅವರು, ‘ಅಮೃತವರ್ಷಿಣಿ’ಗೆ ಇಂದು 25 ವರ್ಷ! ಜಯಶ್ರೀ ದೇವಿ, ದಿನೇಶ್ ಬಾಬು, ಸುಹಾಸಿನಿ, ಶರತ್ ಬಾಬು, ನಿವೇದಿತಾ, ದೇವಾ, ಕಲ್ಯಾಣ್, ಚಿತ್ರಾ ಮತ್ತು ನಮ್ಮ ಪ್ರೀತಿಯ ಎಸ್‌ಪಿಬಿ ಸರ್ ಅವರಿಗೆ ನಾನು ಋಣಿ. ಇಷ್ಟು ವರ್ಷ ನನ್ನ ಮೇಲೆ ಪ್ರೀತಿ ತೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
1997ರಲ್ಲಿ ಬಿಡುಗಡೆಯಾದ ‘ಅಮೃತವರ್ಷಿಣಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಚಿತ್ರವನ್ನು ದಿನೇಶ್ ಬಾಬು ನಿರ್ದೇಶಿಸಿದ್ದು, ಭಾರತಿ ದೇವಿ ಅವರ ಚಿನ್ನಿ ಚಿತ್ರ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿತ್ತು. ಶರತ್ ಬಾಬು, ನಿವೇದಿತಾ ಜೈನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಚಿತ್ರಕ್ಕೆ ದೇವಾ ಅವರು ಹಿನ್ನೆಲೆ ಸಂಗೀತ ಸಂಯೋಜಿಸಿದ್ದು, ದಿನೇಶ್ ಬಾಬು ಛಾಯಾಗ್ರಹಣವಿತ್ತು.
‘ಅಮೃತವರ್ಷಿಣಿ’ ಚಿತ್ರ ರಮೇಶ್ ಅರವಿಂದ್ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.