ADVERTISEMENT

ನೀವೇಕೆ ನೆಗೆಟಿವ್ ಆಲೋಚನೆ ಮಾಡುತ್ತೀರಿ: ರಮೇಶ್ ಅರವಿಂದ್ ಸ್ಫೂರ್ತಿಯ ಮಾತುಗಳು

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 12:26 IST
Last Updated 6 ಜೂನ್ 2021, 12:26 IST
ರಮೇಶ್ ಅರವಿಂದ್
ರಮೇಶ್ ಅರವಿಂದ್   

ಬೆಂಗಳೂರು: ನಟ ರಮೇಶ್ ಅರವಿಂದ್ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಸದಾ ಹೊಸತನ, ಸ್ಫೂರ್ತಿಯ ಮಾತುಗಳನ್ನು ಆಡುವ ಮೂಲಕ ಜನರಿಗೆ ಹುರುಪು ತುಂಬುತ್ತಾರೆ.

ಈ ಬಾರಿ ರಮೇಶ್ ಅರವಿಂದ್, ತಮ್ಮ ಅಧಿಕೃತ ಸಾಮಾಜಿಕ ತಾಣಗಳ ಖಾತೆಗಳಲ್ಲಿ ಹೊಸ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಕೋವಿಡ್ 19 ಎರಡನೇ ಅಲೆಯ ಸಂದರ್ಭದಲ್ಲಿ ಜನರು ಹೇಗಿದ್ದಾರೆ? ಜನರ ಜೀವನಶೈಲಿ ಮತ್ತು ಸಮಾಜದಲ್ಲಿನ ಬದುಕು ಎನ್ನುವ ಕುರಿತು ರಮೇಶ್ ಈ ವಿಡಿಯೊದಲ್ಲಿ ಮಾತನಾಡಿದ್ದಾರೆ.

ADVERTISEMENT

ಈ ಸಂಕಷ್ಟದ ಸಮಯ ಕಳೆದು ಹೋಗಲಿದೆ, ಎಲ್ಲವೂ ಸರಿಯಾಗಲಿದೆ. ಆದರೆ ನಮ್ಮ ದೃಷ್ಟಿಕೋನ ಮತ್ತು ಆಲೋಚನೆಗಳು ಧನಾತ್ಮಕವಾಗಿದ್ದರೆ ಅದು ನಿಜಕ್ಕೂ ನಮಗೆ ಸಹಾಯ ಮಾಡುತ್ತದೆ ಎಂದು ರಮೇಶ್ ಹೇಳಿದ್ದಾರೆ.

ಕಥೆಯೊಂದರ ಉದಾಹರಣೆ ನೀಡುತ್ತಾ, ಅದರ ಮೂಲಕ ಜನರಿಗೆ ಸಂದೇಶ ನೀಡಿರುವ ರಮೇಶ್, ನೀವೇಕೆ ನೆಗೆಟಿವ್ ಯೋಚನೆ ಮಾಡುತ್ತೀರಿ? ಅದನ್ನು ಬಿಟ್ಟು ಹೊಸತನ ಯೋಚಿಸಿ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.