’ಪೆಳ್ಳಿ ಸಂದಡಿ’ ಸಿನಿಮಾ ಮೂಲಕ ತೆಲುಗು ಅಭಿಮಾನಿಗಳ ಮನ ಗೆದ್ದಿರುವ ಕನ್ನಡದ ನಟಿ ಶ್ರೀಲೀಲಾಗೆ ಸ್ಟಾರ್ ನಟ ಮಹೇಶ್ ಬಾಬು ಜತೆ ನಟಿಸುವ ಅವಕಾಶ ಬಂದಿದೆ.
ಹೌದು, ತ್ರಿವಿಕ್ರಮ್ ನಿರ್ದೇಶನ ಮಾಡುತ್ತಿರುವ ನೂತನ ಸಿನಿಮಾಗೆ ಶ್ರೀಲೀಲಾ ಅವರನ್ನು ಎರಡನೇ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ. ತ್ರಿವಿಕ್ರಮ್ ಅವರು ಶ್ರೀಲೀಲಾ ಅವರನ್ನು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ಮಹೇಶ್ ಬಾಬು ಸಹ ಶ್ರೀಲೀಲಾ ನಟನೆಗೆ ಸಹಮತ ವ್ಯಕ್ತಪಡಿದ್ದಾರೆ ಎನ್ನಲಾಗಿದೆ.
ಶ್ರೀಲೀಲಾ ನಟನೆ ಬಗ್ಗೆ ಚಿತ್ರತಂಡ ಇನ್ನು ಅದಿಕೃತವಾಗಿ ಪ್ರಕಟಿಸಿಲ್ಲ. ಈಗಾಗಲೇ ಸಿನಿಮಾದ ನಾಯಕಿಯಾಗಿ ಪೂಜಾ ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀಲೀಲಾ ಆಯ್ಕೆ ಖಚಿತವಾದರೆ ಈ ಸಿನಿಮಾದಲ್ಲಿ ಕನ್ನಡದ ಇಬ್ಬರು ನಟಿಯರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದಂತಾಗುತ್ತದೆ.
ಮಹೇಶ್ ಬಾಬು ಜತೆ ನಟಿಸಲು ಶ್ರೀಲೀಲಾ ಒಂದು ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಪೆಳ್ಳಿ ಸಂದಡಿ ಬಳಿಕ ಅವರಿಗೆ ತೆಲುಗಿನಲ್ಲಿ ಸಾಕಷ್ಟು ಅವಕಾಶಗಳು ಬರುತ್ತಿವೆ.
ಸದ್ಯ ಟಾಲಿವುಡ್ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ, ನಭಾ ನಟೇಶ್ ಮಿಂಚುತ್ತಿದ್ದಾರೆ. ಈ ಸಾಲಿಗೆ ಶ್ರೀಲೀಲಾ ಸೇರ್ಪಡೆಯಾಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.